ಅಣ್ಣಿಗೇರಿ: ಪಟ್ಟಣದಿಂದ ಹಜ್ ಯಾತ್ರೆ ಕೈಗೊಂಡ ಯಾತ್ರಾರ್ಥಿಗಳಿಗೆ ಮುಸ್ಲಿಂ ಸಮಾಜ ಬಾಂಧವರು ಜಯಘೋಷಗಳನ್ನು ಕೂಗುತ್ತ ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ಬಿಳ್ಕೊಟ್ಟರು.
ಒಟ್ಟು ನಾಲ್ಕು ಜನ ಪಟ್ಟಣದಿಂದ ಪ್ರಯಾಣ ಬೆಳೆಸಿದ್ದು, ಪಟ್ಟಣದಿಂದ ಬೆಂಗಳೂರುಗೆ ತೆರಳಿ ಅಲ್ಲಿ ಹಜ್ ಭವನದಲ್ಲಿ ಎರಡು ದಿನಗಳ ಕಾಲ ತರಬೇತಿ ನೀಡಲಾಗುವುದು. ನಂತರ ಅಲ್ಲಿಂದ ವಿಮಾನದ ಮುಖಾಂತರ ಮದೀನಾಕ್ಕೆ ತೆರಳಿ ಅಲ್ಲಿಂದ ಮತ್ತೆ ಮಕ್ಕಾಕ್ಕೆ ತೆರಳುತ್ತಾರೆ ಎಂದು ಮುಸ್ಲಿಂ ಸಮಾಜದ ಮುಖಂಡರಾದ ಎನ್,ಡಿ, ಧಾರವಾಡ ಅವರು ತಿಳಿಸಿದರು.
ಇನ್ನೂ ಇದೇ ವೇಳೆ ಅವರ ಪ್ರಯಾಣ ಸುಖಕರವಾಗಿರಲಿ ಹಾಗೂ ಜಗತ್ತಿನಲ್ಲಿ ಸುಖ ನೆಮ್ಮದಿ ನೆಲೆಸಲಿ ಎಂದು ಬೇಡಿಕೊಂಡು ಬರಲಿ ಎಂದು ಶುಭ ಹಾರೈಸಿದರು.
ಈ ವೇಳೆ ಸಮಾಜದ ಮುಖಂಡರು ಸೇರಿದಂತೆ ಕುಟುಂಬವರ್ಗದವರು ಭಾಗಿಯಾಗಿ ಬಿಳ್ಕೊಟ್ಟರು.
Kshetra Samachara
10/06/2022 06:55 pm