ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಖ್ಯಾತ ಪ್ರವಚನಕಾರ ಡಾ.ಈಶ್ವರ ಮಂಟೂರ ಸ್ವಾಮೀಜಿ ಲಿಂಗೈಕ್ಯ

ಬಾಗಲಕೋಟೆ: ಬಸವ ತತ್ವ ಪ್ರಸಾರಕ ಹಾಗೂ ಖ್ಯಾತ ಪ್ರವಚನಕಾರರಾಗಿದ್ದ ಡಾ.ಈಶ್ವರ ಮಂಟೂರ ಸ್ವಾಮಿಗಳು (48) ಇಂದು ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಸ್ವಾಮೀಜಿ ಡಾ.ಈಶ್ವರ ಮಂಟೂರ ಅವರಿಗೆ ನಿನ್ನೆ ಸಂಜೆ ಎದೆ ನೋವು ಕಾಣಿಸಿಕೊಂಡಿತ್ತು. ಜಮಖಂಡಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ಇಂದು ಬೆಳಗ್ಗೆ ಬಾಗಲಕೋಟೆ ನಗರದ ಕೆರೂಡಿ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ವೈದ್ಯರು ಎಲ್ಲಾ ತಯಾರಿ ಮಾಡಿಕೊಂಡಿದ್ದು, ಮಾರ್ಗದ ಎದುರು ಆಂಬುಲೆನ್ಸ್ ಸಹ ಕಳಿಸಲಾಗಿತ್ತು. ಆದರೆ, ಮಧ್ಯಾಹ್ನ 12.30 ಕ್ಕೆ ಆಸ್ಪತ್ರೆಗೆ ಬರುವಷ್ಟರಲ್ಲಿ ಸ್ವಾಮಿಗಳ ಜೀವ ಹೋಗಿತ್ತು ಎನ್ನಲಾಗಿದೆ.

ಈಶ್ವರ ಮಂಟೂರ ಸ್ವಾಮೀಜಿ ಅವರು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹುನ್ನೂರು-ಮಧುರಖಂಡಿಯ ಬಸವ ಜ್ಞಾನ ಗುರುಕುಲ ಯೋಗಾಶ್ರಮದ ಅಧ್ಯಕ್ಷರೂ ಗುರುಗಳೂ ಆಗಿದ್ದರು. ಅಷ್ಟೇ ಅಲ್ಲದೆ ಅನೇಕ ಮಠಗಳು ಹಾಗೂ ಮಠಾಧೀಶರ ಜೊತೆ ಉತ್ತಮ‌ ಬಾಂಧವ್ಯ ಹೊಂದಿದ್ದ ಸ್ವಾಮೀಜಿ, ರಾಜ್ಯದ ವಿವಿಧೆಡೆ ಬಸವ ತತ್ವ ಪ್ರಸಾರಕ್ಕೆ ಹೋಗುತ್ತಿದ್ದರು.

Edited By : Vijay Kumar
Kshetra Samachara

Kshetra Samachara

09/12/2021 03:51 pm

Cinque Terre

10.4 K

Cinque Terre

7

ಸಂಬಂಧಿತ ಸುದ್ದಿ