ಧಾರವಾಡ: ಉತ್ತರ ಕರ್ನಾಟಕದ ಪ್ರಸಿದ್ಧ ತಬಲಾ ಕಲಾವಿದ ಪಂ. ಷಡಾಕ್ಷರಯ್ಯ ಗುಡ್ಡದಮಠ (74) ಇಂದು (ಗುರುವಾರ) ಬೆಳಿಗ್ಗೆ ನಿಧನರಾಗಿದ್ದಾರೆ.
ಪಂ.ಷಡಕ್ಷರಯ್ಯ ಅವರು ಪತ್ನಿ, ಪುತ್ರ, ಪುತ್ರಿ, ಅಪಾರ ಬಂದು ಬಳಗ ಹಾಗೂ ಶಿಷ್ಯ ವೃಂದವನ್ನು ಅಗಲಿದ್ದಾರೆ.
ಪಂ.ಷಡಕ್ಷರಯ್ಯ ಅವರು ರಾಜ್ಯ ಹಾಗೂ ದೇಶದ ವಿವಿಧ ಭಾಗದಲ್ಲಿ ತಬಲಾ ಕಾರ್ಯಕ್ರಮ ನೀಡಿದ್ದರು. ಅವರ ತಬಲಾ ಸೇವೆಗೆ ವಿವಿಧ ಪ್ರಶಸ್ತಿ, ಪುರಸ್ಕಾರ ಒಲಿದು ಬಂದಿವೆ. ಅವರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಗ್ರಂಥಾಲಯದಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು.
Kshetra Samachara
11/11/2021 10:59 am