ಧಾರವಾಡ: ZOMATO ಕಂಪೆನಿಯು ಡೆಲಿವರಿ ಬಾಯ್ಸ್‌ಗಳ ವಿವಿಧ ಬೇಡಿಕೆಗಳನ್ನು ಈಡೇರಿಸುತ್ತಿಲ್ಲ ಎಂದು ಆರೋಪಿಸಿ ಡೆಲಿವರಿ ಬಾಯ್ಸ್‌ಗಳು ಕಂಪೆನಿ ವಿರುದ್ಧವೇ ತಿರುಗಿಬಿದ್ದು ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೇ ಇಂದು ಡೆಲಿವರಿಗೆ ಹೋಗದೇ ತಮ್ಮ ಮೊಬೈಲ್ ಆ್ಯಪ್‌ನ್ನು ಬಂದ್ ಮಾಡಿ ಕಂಪೆನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಧಾರವಾಡ ನಗರದಲ್ಲಿ ಒಟ್ಟು 150 ಜನ ಡೆಲಿವರಿ ಬಾಯ್ಸ್ ಇದ್ದು, ಯಾರಿಗೂ ಕಂಪೆನಿಯು ಕಾಯಂ ವೇತನ ನೀಡಿಲ್ಲ. ಡೆಲಿವರಿ ಆಧಾರದ ಮೇಲೆ ವೇತನ ನೀಡುತ್ತಿದ್ದು, ದೂರದ ಏರಿಯಾಗಳಿಗೆ ಡೆಲಿವರಿ ಮಾಡಿ ಬರಲು ಕಂಪೆನಿ ಸೂಚಿಸುತ್ತಿದೆ. ಈ ನಿರ್ಧಾರವನ್ನು ಕೈಬಿಟ್ಟು ಕಂಪೆನಿ, ಡೆಲಿವರಿ ಬಾಯ್ಸ್‌ಗಳಿಗೆ ಕಾಯಂ ವೇತನ ನೀಡಬೇಕು ಎಂದು ಹರೀಶ ಆಗ್ರಹಿಸಿದರು.
ಕಳೆದ ಮೂರು ವರ್ಷಗಳಿಂದ ಡೆಲಿವರಿ ಬಾಯ್ಸ್‌ಗಳಾಗಿ ಕೆಲಸ ಮಾಡುತ್ತಿರುವ ನಮಗೆ ಕಂಪೆನಿಯ ವೇತನ ಭದ್ರತೆ ನೀಡಬೇಕು. ಹಾಗೂ ಹೊಸತಾಗಿ ಡೆಲಿವರಿ ಬಾಯ್ಸ್‌ಗಳ ನೇಮಕಾತಿಯನ್ನು ರದ್ದುಪಡಿಸಿ ಈಗಿರುವವರಿಗೇ ವೇತನ ಹೆಚ್ಚಳ ಮಾಡಬೇಕು ಎಂದು ಡೆಲಿವರಿ ಬಾಯ್ಸ್‌ಗಳು ಆಗ್ರಹಿಸಿದರು.
Kshetra Samachara
22/09/2021 03:40 pm