ಹುಬ್ಬಳ್ಳಿ- ಪ್ರತಿಯೊಬ್ಬರಿಗೂ ಹೆಲಿಕಾಪ್ಟರ್ ನಲ್ಲಿ ಹಾರಾಡುವ ಆಸೆ- ಆಕಾಂಕ್ಷೆ ಇರುತ್ತದೆ. ಆದರೆ, ದುಬಾರಿ ಬೆಲೆ ಎಂದು ತಮ್ಮ ಕನಸುಗಳನ್ನು ಅಲ್ಲೇ ಮನಸ್ಸಿನಲ್ಲಿಯೇ ಇಟ್ಟುಕೊಳ್ಳುತ್ತಾರೆ. ಆದರೇನು, ಇಲ್ಲೊಂದು ಸಂಸ್ಥೆ ಕಡಿಮೆ ಬೆಲೆಯಲ್ಲಿ ಸಾಮಾನ್ಯ ಜನರನ್ನೂ ಸಹ ಹಾರಾಡಿಸಲು ಮುಂದಾಗಿದೆ!.
ರಾಜಕಾರಣಿಗಳು, ಶ್ರೀಮಂತರು ಮಾತ್ರ ಹೆಲಿಕಾಪ್ಟರ್ ನಲ್ಲಿ ಹಾರಾಡುತ್ತಿದ್ದರು. ಆದರೆ, ಸಾಮಾನ್ಯ ಜನರಿಗದು ಗಗನ ಕುಸುಮವೇ ಸರಿ. ಅದಕ್ಕಾಗಿ, ಹುಬ್ಬಳ್ಳಿಯ ಬಾಹುಬಲಿ ಹೆಲಿಟೂರಿಸಂ ಕಂಪನಿಯಿಂದ ಇನ್ನು ಮುಂದೆ ಹುಬ್ಬಳ್ಳಿಯಿಂದ ಮತ್ತು ಬೆಳಗಾವಿಯಿಂದ ಹೆಲಿಕಾಪ್ಟರ್ ಸೇವೆ ಪ್ರಾರಂಭಗೊಂಡಿದೆ.
ಇದರಲ್ಲಿ 6 ಜನ ಕುಳಿತುಕೊಳ್ಳುವ ಸಾಮರ್ಥ್ಯದ ಹೆಲಿಕಾಪ್ಟರ್ ಬೆಲ್ 407 ಮಾಡೆಲ್ ಬೆಳಗಾವಿಯಲ್ಲಿ ಇರಿಸಲಾಗಿದೆ ಮತ್ತು ನುರಿತ ಪೈಲಟ್ ಹಾಗೂ ಇಂಜಿನಿಯರ್ ಕೂಡ ಇರಲಿದ್ದಾರೆ. ಇದರಿಂದಾಗಿ ಉತ್ತರ ಕರ್ನಾಟಕದ ಜನರಿಗೆ ತುಂಬಾ ಅನುಕೂಲವಾಗಲಿದೆ. ಈಗಾಗಲೇ ಬೆಂಗಳೂರು, ಮುಂಬೈ, ಹೈದರಾಬಾದ್ ನಿಂದ ಹೆಲಿಕಾಪ್ಟರ್ ಗಳನ್ನು ತರಿಸಲಾಗುತ್ತಿತ್ತು. ಅದು ಜನರಿಗೆ ತುಂಬಾ ದುಬಾರಿ ಆಗಿದ್ದು, ಇನ್ನು ಮುಂದೆ ಕಡಿಮೆ ವೆಚ್ಚದಲ್ಲಿ ಬಾಹುಬಲಿ ಹೆಲಿಟೂರಿಸಂ ಸಂಸ್ಥೆ ಹೆಲಿಕಾಪ್ಟರ್ ಗಳನ್ನು ನೀಡಲು ಮುಂದಾಗಿದೆ. ಇದರಿಂದಾಗಿ ಸಾಮಾನ್ಯ ಜನರೂ ಸಹ ಹಾರಾಡಲು ತುಂಬಾ ಅನುಕೂಲ ಆಗಿದೆ.
ಈ ಸಂಸ್ಥೆಯು ಹೆಲಿಕಾಪ್ಟರ್ ಗಳನ್ನು ಪ್ರಮುಖವಾಗಿ ಜಾಲಿರೈಡ್, ಮದುವೆ ಮತ್ತಿತರ ಸಮಾರಂಭ, ಪುಷ್ಪವೃಷ್ಟಿ, ಚಿತ್ರೀಕರಣ ಸೇವೆಯ ಜೊತೆಗೆ ವಿಶೇಷ ಪ್ರಯಾಣ ಕೂಡ ಪ್ರಾರಂಭಿಸಿದ್ದಾರೆ. ಇದರಿಂದಾಗಿ ಶ್ರೀಮಂತರು ಅಷ್ಟೇ ಅಲ್ಲದೆ, ಸಾಮಾನ್ಯ ಜನರೂ ಹೆಲಿಕಾಪ್ಟರ್ ಹತ್ತಿ ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಬಾಹುಬಲಿ ಹೆಲಿಟೂರಿಸಂ ಮುಂದಾಗಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಒಟ್ಟಿನಲ್ಲಿ ನಮ್ಮ ಉತ್ತರ ಕರ್ನಾಟಕದ ಜನ, ಇನ್ನು ಮುಂದೆ ಬೇರೆ ಬೇರೆ ಕಡೆಯಿಂದ ಹೆಲಿಕಾಪ್ಟರ್ ಗಳನ್ನು ದುಬಾರಿ ದರದಲ್ಲಿ ತರಿಸುವುದಕ್ಕಿಂತ ನಮ್ಮ ಭಾಗದ ಬಾಹುಬಲಿ ಹೆಲಿಟೂರಿಸಂ ಸಂಸ್ಥೆಗೆ ಭೇಟಿ ಕೊಟ್ಟು, ಕಡಿಮೆ ಬೆಲೆಯಲ್ಲಿ ಹೆಲಿಕಾಪ್ಟರ್ ಗಳನ್ನು ನಾನಾ ಸಮಾರಂಭಕ್ಕೆ ಪಡೆಯಬಹುದು.
ಹೆಚ್ಚಿನ ಮಾಹಿತಿಗಾಗಿ 9740668512 ಸಂಪರ್ಕಿಸಬಹುದು.
Kshetra Samachara
13/12/2020 05:45 pm