ಧಾರವಾಡ: ಧಾರವಾಡ ತಾಲೂಕಿನ ಯಾದವಾಡ ಗ್ರಾಮದ ಬಳಿ ಹಕ್ಕಿಯೊಂದು ಪೆಟ್ಟಾಗಿ ರಸ್ತೆಯಲ್ಲಿ ಬಿದ್ದಿತ್ತು. ಅದನ್ನು ನೋಡಿದ ಅದೇ ಗ್ರಾಮದ ಬಸವರಾಜ ಹೊಂಗಲ ಎನ್ನುವವರು ಆ ಹಕ್ಕಿಗೆ ನೀರು ಕುಡಿಸಿ ಆರೈಕೆ ಮಾಡಿದ್ದಾರೆ.
ಹಕ್ಕಿಯ ಚುಂಚಿಗೆ ಪೆಟ್ಟಾಗಿ ರಕ್ತಸ್ರಾವವಾಗುತ್ತಿತ್ತು. ಅದನ್ನು ಕಂಡ ಬಸವರಾಜ ಅದಕ್ಕೆ ನೀರು ಕುಡಿಸಿ, ನಂತರ ಬಾಳೆ ಹಣ್ಣನ್ನೂ ತಿನಿಸಿ ಅದು ಹಾರುವವರೆಗೂ ಅಲ್ಲೇ ನಿಂತು ಅದನ್ನು ಆರೈಕೆ ಮಾಡಿದ್ದಾರೆ.
ನೀರು ಕುಡಿದು ಕೊಂಚ ಬಾಳೆಹಣ್ಣು ಕುಕ್ಕಿ ತಿಂದ ನಂತರ ಆ ಪಕ್ಷಿ ಹುಷಾರಾಗಿ ಹಾರಿ ಹೋಗಿದೆ. ಬಸವರಾಜನಿಂದ ಆ ಪಕ್ಷಿಗೆ ಮರುಜೀವ ಸಿಕ್ಕಂತಾಗಿದೆ.
Kshetra Samachara
27/10/2021 05:00 pm