ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಸುಳ್ಳು ವದಂತಿ ನಂಬದಿರಿ; ಚಿರತೆ ಕಂಡುಬಂದಲ್ಲಿ ತಕ್ಷಣ ಮಾಹಿತಿ ನೀಡಿ

ಧಾರವಾಡ: ಹುಬ್ಬಳ್ಳಿಯ ಗಿರಿಯಾಲ, ಕಟನೂರು ಗುಡಿಸಾಗರ, ಅಂಚಟಗೇರಿ, ಬೂದನಗುಡ್ಡ ಸೇರಿದಂತೆ ಆ ಭಾಗದ ಸುಮಾರು 1,400 ಹೆಕ್ಟೇರ್ ಭೂಮಿಯಲ್ಲಿ ರಕ್ಷಿತ ಅರಣ್ಯ (ಯಲ್ಲಾಪುರ, ಶಿರಸಿ ಭಾಗಕ್ಕೆ ಹೊಂದಿಕೊಂಡಂತೆ) ಪ್ರದೇಶವಿದೆ. ಚಿರತೆ ಸೇರಿದಂತೆ ವಿವಿಧ ಕಾಡು ಪ್ರಾಣಿಗಳು ಈ ರಕ್ಷಿತ ಅರಣ್ಯದಲ್ಲಿ ಇರುವುದು ಸಹಜ.

ಹುಬ್ಬಳ್ಳಿಯ ಗುಡಿಸಾಗರ, ಬೂದನಗುಡ್ಡ, ಅಂಚಟಗೇರಿ ಸೇರಿದಂತೆ ಇತರ ಭಾಗದಲ್ಲಿ ಇಲ್ಲಿಯವರೆಗೆ ಮತ್ತು ನಿನ್ನೆ ದಿನ ಸಹ ಚಿರತೆ ಕಂಡುಬಂದ ಬಗ್ಗೆ ಅರಣ್ಯ ಇಲಾಖೆಗೆ ಯಾವುದೇ ರೀತಿಯ ಮಾಹಿತಿ ಬಂದಿರುವುದಿಲ್ಲ. ಆದಾಗ್ಯೂ ಅರಣ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಗಳು ಆ ಭಾಗದಲ್ಲಿ ನಿರಂತರ ಪರಿಶೀಲನೆ, ಗಸ್ತು ಮಾಡುತ್ತಿದ್ದಾರೆ.

ಕಾಡು ಪ್ರಾಣಿ, ಚಿರತೆ ದಾಳಿ ಕುರಿತು ಬೇರೆ ರಾಜ್ಯ, ಪ್ರದೇಶಕ್ಕೆ ಸಂಬಂದಿಸಿದ ಫೋಟೋ ಮತ್ತು ವೀಡಿಯೋವನ್ನು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು, ಸಾರ್ವಜನಿಕರಿಗೆ ತಪ್ಪು ಸಂದೇಶ ರವಾನಿಸುತ್ತಿದ್ದಾರೆ. ಇದರಿಂದ ಸಾರ್ವಜನಿಕರು ಭಯಬೀತರಾಗುತ್ತಾರೆ. ಆದ್ದರಿಂದ ಯಾರು ಸಹ ಇಂತಹ ಫೇಕ್ ಸಂದೇಶಗಳನ್ನು ಇತರರಿಗೆ ಕಳಿಸುವ, ಪ್ರಚುರಪಡಿಸಿ ಮೂಲಕ ಸಾರ್ವಜನಿಕರಲ್ಲಿ ಭಯ ಮೂಡಿಸದಂತೆ ಡಿಎಫ್ಓ ಮನವಿ ಮಾಡಿದ್ದಾರೆ.

ಇಂತಹ ಫೇಕ್ (fake) ಸಂದೇಶಗಳನ್ನು ಸಾರ್ವಜನಿಕರು ನಂಬದಂತೆ ಮತ್ತು ಇತರರಿಗೆ ಫಾರ್‌ವರ್ಡ್ ಮಾಡದಂತೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Edited By : Vijay Kumar
Kshetra Samachara

Kshetra Samachara

30/09/2021 06:21 pm

Cinque Terre

32.24 K

Cinque Terre

1

ಸಂಬಂಧಿತ ಸುದ್ದಿ