ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಯುವಕ-ಯುವತಿಯರ ರ್‍ಯಾಂಪ್ ವಾಕ್! ಕಲರ್ ಫುಲ್ ಸ್ಟೇಜ್‌ನಲ್ಲಿ ಜಬರ್ ದಸ್ತ್ ಶೋ

ಪಬ್ಲಿಕ್ ನೆಕ್ಸ್ಟ್- ಈರಣ್ಣ ವಾಲಿಕಾರ

ಹುಬ್ಬಳ್ಳಿ: ಜಗಮಗಿಸುವ ಬಟ್ಟೆಗಳನ್ನು ತೊಟ್ಟು ಮಿಂಚುತ್ತಿರುವ ಯುವಕ-ಯುವತಿಯರು, ರ್‍ಯಾಂಪ್ ಮೇಲೆ ವಾಕ್ ಮಾಡುತ್ತ ಬರುತ್ತಿರುವ ಮಾಡೆಲ್‌ಗಳು, ಫ್ಯಾಶನ್ ಶೋ ಕಂಡು ಚಪ್ಪಾಳೆ ತಟ್ಟಿ, ಸಿಳ್ಳಿ ಹೊಡೆಯುತ್ತಿರುವ ಜನರು- ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ.

ಹುಬ್ಬಳ್ಳಿಯ ಖಾಸಗಿ ಹೊಟೇಲ್ ನಲ್ಲಿ ಪ್ರಮಥ್ ಸ್ಟಾರ್ ಕಂಪನಿ ಇಂಟರ್‌ನ್ಯಾಷನಲ್ ಫ್ಯಾಶನ್ ಶೋ ಹಮ್ಮಿಕೊಂಡಿತ್ತು. ಕೊರೊನಾ ಎರಡನೇ ಅಲೆ ಹಾವಳಿಯಿಂದ ರೋಸಿ ಹೋಗಿದ್ದ ಮಾಡೆಲ್‌ಗಳು, ಎರಡನೇ ಅಲೆಯಿಂದ ಪರದಾಟ ನಡೆಸಿದ್ದರು. ಸರಿಯಾದ ವೇದಿಕೆ ಸಿಗದೇ ಸಂಕಷ್ಟಕ್ಕೆ ಸಿಲುಕಿದ್ದರು. ಇದೀಹ ಸರ್ಕಾರ ಲಾಕ್‌ಡೌನ್ ತೆರವುಗೊಳಿಸಿದ್ದರಿಂದ ಎಲ್ಲ ಚಟುವಟಿಕೆಗಳು ಆರಂಭ ಆಗುತ್ತಿವೆ. ಹೀಗಾಗಿ ಹುಬ್ಬಳ್ಳಿಯ ಪ್ರಮಥ್ ಸ್ಟಾರ್ ಕಂಪನಿ ಆಯೋಜನೆ ಮಾಡಿದ್ದ ಫ್ಯಾಶನ್ ಶೋ ನಲ್ಲಿ, ವಿವಿಧ ರಾಜ್ಯದ ಹಾಗೂ ಉತ್ತರ ಕರ್ನಾಟಕ ಭಾಗದ ಮಾಡೆಲ್‌ಗಳು ಪಾಲ್ಗೊಂಡು, ಭಿನ್ನ ವಿಭಿನ್ನ ವಾಕ್ ಗಳನ್ನು ಮಾಡಿ ಎಂಜಾಯ್ ಮಾಡಿದ್ರು.

ಹುಬ್ಬಳ್ಳಿಯ ಪ್ರಮಥ್ ಸ್ಟಾರ್ ಕಂಪನಿ ಫ್ಯಾಶನ್ ಶೋ ಆಯೋಜಿಸಿದ್ದು, ದೇಶದ ವಿವಿಧ ರಾಜ್ಯದ ಯುವಕ, ಯುವತಿಯರು ಭಾಗವಹಿಸಿದ್ದರು. ವೆಸ್ಟರ್ನ್, ಕಲ್ಚರಲ್ ಸೇರಿದಂತೆ ಹಲವು ಬಗೆಯ ಉಡುಗೆಗಳನ್ನು ತೊಟ್ಟು ವೇದಿಕೆಯಲ್ಲಿ ಮಿಂಚು ಹರಿಸಿದರು.

ಎರಡನೇ ಅಲೆಯ ಬಳಿಕ ಮೊದಲ‌ ಫ್ಯಾಶನ್ ಶೋ ಇದಾಗಿದ್ದು, 40 ಕ್ಕೂ ಹೆಚ್ಚು ಮಾಡೆಲ್‌ಗಳು ಈ ಈವೆಂಟ್‌ನಲ್ಲಿ ಪಾಲ್ಗೊಂಡಿದ್ದರು. ಯುವಕ-ಯುವತಿಯರು ಮಸ್ತ್ ಮಸ್ತ್ ಡ್ರೆಸ್ ತೊಟ್ಟು ಫ್ಯಾಶನ್ ಶೋದಲ್ಲಿ ವಾಕ್ ಮಾಡುತ್ತಿದ್ದರೆ, ಇತ್ತ ಮಾಡೆಲ್‌ಗಳ ಝಲಕ್ ನೋಡಿ ಅವಳಿ ನಗರದ ಜನತೆ ಚಪ್ಪಾಳೆ ತಟ್ಟಿ, ಸಿಳ್ಳೆ ಹೊಡೆದು ಸಂಭ್ರಮಿಸಿದ್ದು ವಿಶೇಷವಾಗಿತ್ತು.

Edited By : Manjunath H D
Kshetra Samachara

Kshetra Samachara

20/09/2021 05:21 pm

Cinque Terre

59.84 K

Cinque Terre

4