ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಯುವಕನಿಗೆ ಪರ್ಸ್ ಮರಳಿಸಿ, ಕರ್ತವ್ಯ ಪ್ರಜ್ಞೆ ಮೆರೆದ ಕಾನ್ಸ್ಟೇಬಲ್

ನವಲಗುಂದ : ನವಲಗುಂದ ಠಾಣೆಯ ಕಾನ್ಸ್ಟೇಬಲ್ ರಮೇಶ ಭಗವತಿ ಎಂಬುವವರು ಪಟ್ಟಣದ ಬಸ್ ನಿಲ್ದಾಣದಲ್ಲಿ ಪರ್ಸ್ ಕಳೆದುಕೊಂಡ ಯುವಕನ ಪರ್ಸ್ ಅನ್ನು ವಾಪಸ್ ನೀಡಿ, ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಐಹೊಳೆ ಗ್ರಾಮದ ಅಯ್ಯಪ್ಪ ಸ್ವಾಮಿ ಮಾಲಾಧಾರಿ ಸಚಿನ್ ಶೇಖಪ್ಪ ಅಂಗಡಿ ಎಂಬ ಯುವಕ, ನವೆಂಬರ್ 21 ರಂದು ಖಾಸಗಿ ಕೆಲಸಕ್ಕೆಂದು ನವಲಗುಂದಕ್ಕೆ ಆಗಮಿಸಿದ ವೇಳೆ ಪರ್ಸ್ ನಲ್ಲಿದ್ದ 8,500 ರೂಪಾಯಿ ಸೇರಿದಂತೆ ಚಾಲನೆ ಪರವಾನಗಿ ಪತ್ರ, ಆಧಾರ್ ಕಾರ್ಡ್ ನ್ನು ಪರ್ಸ್ ಕಳೆದುಕೊಂಡಿದ್ದ. ಇವುಗಳು ಸಿಕ್ಕ ಕೂಡಲೇ ಕಾನ್ಸ್ಟೇಬಲ್ ರಮೇಶ ಭಗವತಿ ಈಗ ಯುವಕನಿಗೆ ಮರಳಿಸಿ ಮಾನವೀಯತೆ ಮೆರೆದಿದ್ದಾರೆ.

Edited By : PublicNext Desk
Kshetra Samachara

Kshetra Samachara

10/12/2021 08:56 pm

Cinque Terre

7.26 K

Cinque Terre

1

ಸಂಬಂಧಿತ ಸುದ್ದಿ