ಕಲಘಟಗಿ: ಪಟ್ಟಣದ ಮೃತ್ಯುಂಜಯ ಕೆರೆಗೆ ಹಿರಿಯ ದಿವಾಣಿ ನ್ಯಾಧೀಶರಾದ ಜಿ ಆರ್ ಶೆಟ್ಟರ್ ಹಾಗೂ ದಿವಾಣಿ ನ್ಯಾಧೀಶರಾದ ಗಣೇಶ್ ಎನ್ ಅವರು ಭೇಟಿ ನೀಡಿ ಪರಿಶೀಲನೆ ಮಾಡಿದರು.
ಕೆರೆಯ ಸ್ವಚ್ಚತಾ ಕಾರ್ಯದ ಕುರಿತು ಪರಿಶೀಲನೆ ಮಾಡಿ ಕೆರೆಯ ಮಾಹಿತಿ ಪಡೆದು ಮಾತನಾಡಿ,ರೈತರ ಜೀವನಾಡಿಗಳಾದ ಕೆರೆಗಳ ಸಂರಕ್ಷಣೆ ಅಗತ್ಯವಿದೆ ಹಾಗೂ ಕೆರೆಗಳ ಒತ್ತುವರಿ ತಡೆಯ ಬೇಕಿದೆ ಎಂದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಮಂಜುನಾಥ ಕಂಪ್ಲಿ,ಪ ಪಂ ಮುಖ್ಯಾಧಿಕಾರಿ ವಾಯ್ ಜಿ ಗದ್ದಿಗೌಡರ,ಆರ್ ಎಸ್ ಉಡುಪಿ,ವಿ ಬಿ ಹಾಗೂ ವಕೀಲರು,ಪ ಪಂ ಸದಸ್ಯರು,ಸಿಬ್ಬಂದಿ ಉಪಸ್ಥಿತರಿದ್ದರು.
Kshetra Samachara
02/10/2021 02:37 pm