ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಹೊರ ರಾಜ್ಯದ ಕ್ಷೌರಿಕರಿಗೆ ಪರವಾನಿಗೆ ನೀಡಬೇಡಿ ಎಂದು ಪ್ರತಿಭಟಿಸಿದ ಕರವೇ

ನವಲಗುಂದ : ಹೊರ ರಾಜ್ಯದಿಂದ ಬಂದವರಿಗೆ ಕ್ಷೌರದಂಗಡಿ ತೆರೆಯಲು ಪರವಾನಿಗೆ ನೀಡಬಾರದು ಮತ್ತು ಸ್ಥಳೀಯರಿಗೆ ಆಧ್ಯತೆ ನೀಡಬೇಕು ಎಂದು ಒತ್ತಾಯಿಸಿ, ಪಟ್ಟಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ನವಲಗುಂದ ತಾಲೂಕು ಘಟಕದ ವತಿಯಿಂದ ಪ್ರತಿಭಟನೆಯನ್ನು ನಡೆಸಲಾಯಿತು.

ಹೌದು ಬುಧವಾರ ನಡೆಸಲಾದ ಪ್ರತಿಭಟನೆಯಲ್ಲಿ ಆಗ್ರಹಿಸಿದ ಪ್ರತಿಭಟನಾಕಾರರು, ನವಲಗುಂದದವರಾದ ಅಶೋಕ ಮಜ್ಜಿಗುಡ್ಡ ಅವರ ಅಂಗಡಿಯನ್ನು ಹೊರ ರಾಜ್ಯದವರಿಗೆ ಬಾಡಿಗೆ ನೀಡಬೇಡಿ ಎಂದು ಮನವಿ ಮಾಡಿಕೊಂಡರೂ ಸಹ ನೀಡಿದ್ದಾರೆ. ಇದರಿಂದ ಕ್ಷೌರಿಕ ಸಮಾಜ ಬಾಂಧವರಿಗೆ ಅನ್ಯಾಯವಾಗಿದೆ. ಈ ಬಗ್ಗೆ ತಹಶೀಲ್ದಾರರು ಪುರಸಭೆ ಮುಖ್ಯಾಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಹೊರ ರಾಜ್ಯದ ಕ್ಷೌರಿಕರಿಗೆ ಪರವಾನಿಗೆ ನೀಡದಂತೆ ಕ್ರಮ ಕೈಗೊಳ್ಳಬೇಕಿದೆ. ಇಲ್ಲವಾದಲ್ಲಿ ಇದೇ ತಿಂಗಳ 18 ನೇ ತಾರೀಕಿನಂದು ಪುರಸಭೆ ಎದುರು ಉಪವಾಸ ಸತ್ಯಾಗ್ರಹ ಮಾಡಲಾಗುವುದು ಎಂದು ತಹಶೀಲ್ದಾರ್ ಗೆ ಮನವಿ ಸಲ್ಲಿಸಿದರು.

Edited By : PublicNext Desk
Kshetra Samachara

Kshetra Samachara

13/10/2021 04:50 pm

Cinque Terre

25.58 K

Cinque Terre

0

ಸಂಬಂಧಿತ ಸುದ್ದಿ