ಧಾರವಾಡ: ವೈದ್ಯಕೀಯ ಶಿಕ್ಷಣ ಪಡೆಯುವುದಕ್ಕೋಸ್ಕರ ಉಕ್ರೇನ್ ದೇಶಕ್ಕೆ ತೆರಳಿದ್ದ ಧಾರವಾಡದ ಮತ್ತೊಬ್ಬ ವಿದ್ಯಾರ್ಥಿ ಇದೀಗ ಉಕ್ರೇನ್ ದೇಶದಲ್ಲೇ ಲಾಕ್ ಆಗಿದ್ದು, ಆತನ ತನ್ನ ಕುಟುಂಬಸ್ಥರಲ್ಲಿ ತೀವ್ರ ಆತಂಕ ಸೃಷ್ಠಿಸಿದೆ.
ಮಾಳಮಡ್ಡಿ ವೆಂಕಟೇಶ್ವರ ದೇವಸ್ಥಾನದ ಬಳಿಯ ಮಿಲನ್ ದೇವಮಾನೆ ಎಂಬ ವಿದ್ಯಾರ್ಥಿಯೇ ಇದೀಗ ಯುದ್ಧ ಪೀಡಿತ ಉಕ್ರೇನ್ ದೇಶದಲ್ಲಿ ಸಿಲುಕಿಕೊಂಡಿದ್ದಾನೆ. ಕಳೆದ ಮೂರು ತಿಂಗಳ ಹಿಂದಷ್ಟೇ ಮಿಲನ್ ವೈದ್ಯಕೀಯ ಶಿಕ್ಷಣ ಪಡೆಯುವುದಕ್ಕೋಸ್ಕರ ಉಕ್ರೇನ್ ದೇಶಕ್ಕೆ ತೆರಳಿದ್ದ. ಉಕ್ರೇನ್ ದೇಶದ ಜಾಪ್ರೋಜಿಯಾ ವಿಶ್ವವಿದ್ಯಾಲಯದಲ್ಲಿ ಮಿಲನ್ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದ. ರಷ್ಯಾ ಮತ್ತು ಉಕ್ರೇನ್ ದೇಶದ ನಡುವೆ ಯುದ್ಧ ನಡೆಯುವ ಸಂದೇಶವನ್ನು ಉಕ್ರೇನ್ ದೇಶ ಮೊದಲೇ ಸೂಚಿಸಿತ್ತು. ವಾಪಸ್ ಭಾರತಕ್ಕೆ ಬರಲು ದಾಖಲಾತಿಗಳನ್ನು ಸರಿಪಡಿಸಲು ಮಿಲನ್ ಅವರ ಕೈಯಿಂದ ಆಗದೇ ಇದ್ದಿದ್ದರಿಂದ ಇದೀಗ ಅವರು ಉಕ್ರೇನ್‌ಲ್ಲೇ ಲಾಕ್ ಆಗಿದ್ದಾರೆ.
ಇದೀಗ ಮಿಲನ್ ಜಾಪ್ರೋಜಿಯಾದಿಂದ ಹಂಗೇರಿಯಾಕ್ಕೆ ಬಂದು ತಲುಪಿದ್ದಾನೆ. ನಿನ್ನೆ ಮಧ್ಯಾಹ್ನ 12 ಕ್ಕೆ ವೀಡಿಯೋ ಕಾಲ್ ಮುಖಾಂತರ ಮಾತನಾಡಿದ್ದಾನೆ. ಅಲ್ಲಿ ಸರಿಯಾಗಿ ಸಿಗ್ನಲ್ ಬರುತ್ತಿಲ್ಲ. ಇವತ್ತು ಜಿಲ್ಲಾಧಿಕಾರಿಗಳು ಸಹ ಮನೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಬಾರ್ಡರ್ ಕ್ರಾಸ್ ಮಾಡುತ್ತಿರುವುದಾಗಿ ನನ್ನ ಸಹೋದರ ತಿಳಿಸಿದ್ದ. ಆತ ಸುರಕ್ಷಿತವಾಗಿ ಮನೆಗೆ ಬರುವ ನಿರೀಕ್ಷೆ ಇದೆ ಎಂದು ಮಿಲನ್ ಸಹೋದರ ಅನಂತ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಏನೇ ಆಗಲಿ ಯುದ್ಧ ಪೀಡಿತ ಉಕ್ರೇನ್ ದೇಶದಲ್ಲಿ ಸಿಲುಕಿರುವ ಮಿಲನ್ ಸುರಕ್ಷಿತವಾಗಿ ಮರಳಿ ನಮ್ಮ ದೇಶಕ್ಕೆ ಬರಲಿ ಎಂಬುದೇ ನಮ್ಮ ಹಾರೈಕೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
04/03/2022 09:52 pm