ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಯಾಕಾದರೂ ಬಂತೋ ಸ್ಮಾರ್ಟ್ ಸಿಟಿ: ಅವ್ಯವಸ್ಥೆ ಕಂಡು ಜನ ಸಿಡಿಮಿಡಿ

ಹುಬ್ಬಳ್ಳಿ: ನೂರಾರು ಕೋಟಿ ವೆಚ್ಚ ಮಾಡಿ ಹುಬ್ಬಳ್ಳಿ ಧಾರವಾಡ ಅವಳಿನಗರಕ್ಕೆ ಸ್ಮಾರ್ಟ್ ಸಿಟಿ ಯೋಜನೆ ತರಲಾಗಿದೆ. ಆದರೆ ಸ್ಮಾರ್ಟ್ ಆಗಬೇಕಿದ್ದ ನಗರ ಈಗ ಅವ್ಯವಸ್ಥೆಯ ಕೈಗನ್ನಡಿಯಾಗಿದ್ದು, ಇಂತಹ ಯೋಜನೆ ವಿರುದ್ಧ ಸಾರ್ವಜನಿಕರು ಬೇಸರ ವ್ಯಕ್ತಪಡಿಸುವಂತಾಗಿದೆ.

ಹುಬ್ಬಳ್ಳಿಯ ಹೃದಯ ಭಾಗದಲ್ಲಿರುವ ಸಿಬಿಟಿಯ ಬಳಿಯಲ್ಲಿ ಫುಟ್ ಪಾತ್ ಅವ್ಯವಸ್ಥೆ ಹಾಗೂ ರಸ್ತೆಗಳು ಗುಂಡಿ‌ ಬಿದ್ದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನೂ ಮೊದಲು ಇದ್ದ ಫುಟ್ ಪಾತ್ ಮೇಲೆಯೇ ಅವ್ಯವಸ್ಥಿತ ರೀತಿಯ ಫೀವರ್ಸ್ ಅಳವಡಿಸಿದ್ದು, ಜನರು ಹಾಗೂ ಸ್ಥಳೀಯ ವ್ಯಾಪಾರಸ್ಥರು ಸ್ಮಾರ್ಟ್ ಸಿಟಿ ಯೋಜನೆ ವಿರುದ್ಧ ಹಿಡಿಶಾಪ ಹಾಕುವಂತಾಗಿದೆ..

ಇನ್ನೂ ಸಾಕಷ್ಟು ಭರವಸೆ ಹೊತ್ತುಕೊಂಡಿದ್ದ ಜನರ ಜೀವನ ಈಗ ಅಯೋಮಯವಾಗಿದೆ. ಸ್ಮಾರ್ಟ್ ಸಿಟಿ ಹೆಸರಲ್ಲಿ ಸ್ಮಾರ್ಟ್ ಆಗಬೇಕಿದ್ದ ರಸ್ತೆಗಳು ಹಾಗೂ ಫುಟ್ ಪಾತ್ ಗಳು ಈಗ ಅವ್ಯವಸ್ಥೆ ಆಗರವಾಗಿದೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಸೂಕ್ತ ಕ್ರಮಗಳನ್ನು ಜರುಗಿಸಿ ಮಹತ್ವದ ಯೋಜನೆಯ ಮಹತ್ವವನ್ನು ಅರಿಯುವ ಕಾರ್ಯವನ್ನು ಮಾಡಬೇಕಿದೆ.

Edited By : Manjunath H D
Kshetra Samachara

Kshetra Samachara

08/10/2022 04:23 pm

Cinque Terre

52.64 K

Cinque Terre

9

ಸಂಬಂಧಿತ ಸುದ್ದಿ