ಹುಬ್ಬಳ್ಳಿ: ಹುಬ್ಬಳ್ಳಿ ತಾಲೂಕಿನ ಕೋಳಿವಾಡ ಗ್ರಾಮ, ಕೋಳಿವಾಡ ಎಂದು ಕೂಡಲೇ ಮೊದಲು ನೆನಪಾಗುವುದೇ ಕವಿ ಕುಮಾರವ್ಯಾಸರ ಹುಟ್ಟೂರು, ಆದರೆ ಈ ಗ್ರಾಮಕ್ಕೆ ಹೋಗಬೇಕೆಂದರೆ ಹರಸಾಹಸ ಪಡಬೇಕಾಗಿದೆ ಯಾಕಂತೀರಾ? ಈ ರಸ್ತೆಯನ್ನು ಒಮ್ಮೆ ಸರಿಯಾಗಿ ನೋಡಿ ನಿಮಗೆ ಅರ್ಥವಾಗುತ್ತದೆ. ರಾಷ್ಟ್ರೀಯ ಹೆದ್ದಾರಿಯಿಂದ ರಾಜ್ಯ ಹೆದ್ದಾರಿಗೆ ಸೇರಿಕೊಂಡು ಹೋಗುವ ಈ ರಸ್ತೆ ಕೋಳಿವಾಡ ಕ್ರಾಸ್‌ನಿಂದ ಮುಳುಗುಂದ ಗ್ರಾಮದವರೆಗೆ ರಸ್ತೆಯ ತುಂಬೆಲ್ಲ ತಗ್ಗು ಗುಂಡಿಗಳು ಬಿದ್ದು ಸಂಚಾರಕ್ಕೆ ಕುತ್ತು ತಂದಿದೆ.
ಇನ್ನೂ ಈ ಮಾರ್ಗವಾಗಿ ದಿನಂಪ್ರತಿ ಹುಬ್ಬಳ್ಳಿ ಇಂದ ಬಸ್ಸುಗಳ ವ್ಯವಸ್ಥೆ ಇದ್ದು,ಕೋಳಿವಾಡ ಮತ್ತು ಮುಳುಗುಂದ ಮಾರ್ಗವಾಗಿ ಶಿರಹಟ್ಟಿ ಪಟ್ಟಣಕ್ಕೆ ಗಂಟೆಗೆ ಒಂದು ಎರಡು ಬಸುಗಳು ತೆರಳುತ್ತದೆ. ಪ್ರಯಾಣಿಕರು ಖಾಸಗಿ ವಾಹನದ ಮುಖಾಂತರ ಸಾವಿರಾರು ಜನ ಈ ಮಾರ್ಗದಲ್ಲಿ ಪ್ರಯಾಣಿಸುತ್ತಾರೆ.
ಇನ್ನೂ ಈ ರಸ್ತೆಯಲ್ಲಿ ಮರುಳು ತುಂಬಿಕೊಂಡು ಹೋಗುವ ಟಿಪ್ಪರ್ ಗಳ ಓಡಾಟ ಸಹ ಬಹಳ ಹೇರಳವಾಗಿತ್ತು.ಈ ವಿಷಯವಾಗಿ ಕೋಳಿವಾಡ ಗ್ರಾಮಸ್ಥರು ಪ್ರತಿಭಟನೆಯನ್ನು ಮಾಡಿ ಟಿಪ್ಪರ್‌ಗಳ ಸಂಚಾರಕ್ಕೆ ಬ್ರೇಕ್ ಹಾಕಿಸಿದ್ದಾರೆ. ಕೋಳಿವಾಡ ಗ್ರಾಮದಿಂದ ಕೋಳಿವಾಡ ಕ್ರಾಸ್‌ಗೆ ಬರಬೇಕಾದರೆ ಮೂರ್ನಾಲ್ಕು ಕಿಲೋಮೀಟರ್ ರಸ್ತೆಗೆ 15 ನಿಮಿಷಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ ಎಂದು ಪ್ರಯಾಣಿಕರು ದೂರುತ್ತಿದ್ದಾರೆ.
ಇನ್ನೂ ಈ ಮಾರ್ಗ ಸರಿಯಿಲ್ಲದ ಕಾರಣ ಪ್ರಯಾಣಿಕರು ಗದಗ್ ಮತ್ತು ಹುಲಕೋಟಿ ಮಾರ್ಗವಾಗಿ ಮುಳುಗುಂದ ಮತ್ತು ಶಿರಹಟ್ಟಿ ಪಟ್ಟಣಕ್ಕೆ ತೆರಳುತ್ತಿದ್ದಾರೆ. ಮುಳುಗುಂದ ಪಟ್ಟಣದಲ್ಲಿ ಇರುವ ದಾವಲ್ ಮಲಿಕ್ ಗುಡ್ಡಕ್ಕೆ ಮತ್ತು ಶಿರಹಟ್ಟಿ ಫಕೀರೇಶ್ವರ ಮಠಕ್ಕೆ ಪ್ರಯಾಣಿಕರು ಅಧಿಕ ಸಂಖ್ಯೆಯಲ್ಲಿ ಇದೇ ಮಾರ್ಗವಾಗಿ ಸಂಚಾರ ಮಾಡುತ್ತಾರೆ.
ಸಂಬಂಧಪಟ್ಟ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಇತ್ತ ಕಡೆ ಗಮನಹರಿಸಿ ತಕ್ಷಣವೇ ರಸ್ತೆಯನ್ನು ಸರಿ ಮಾಡಿಸಿ ಕೊಡಬೇಕೆಂದು ದಿನಪ್ರತಿ ಸಂಚಾರ ಮಾಡುತ್ತಿರುವ ಪ್ರಯಾಣಿಕರು ಒತ್ತಾಯ ಮಾಡುತ್ತಿದ್ದಾರೆ.
Kshetra Samachara
09/08/2022 01:28 pm