ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ದೇವಾಲಯ ಪಕ್ಕದಲ್ಲೇ ಶೌಚಾಲಯ: ಪುರಸಭೆ ಕಾರ್ಯ ಅಸಹ್ಯ

ನವಲಗುಂದ: ಅಚ್ಚುಕಟ್ಟಾದ ಮನೆಗಳು, ಖಾಲಿ ರಸ್ತೆ, ನಿರ್ಮಾಣ ಹಂತದಲ್ಲಿರುವ ಗಾರ್ಡನ್, ಅಕ್ಕಪಕ್ಕ ಮನೆಗಳನ್ನು ಹೊರತು ಪಡಿಸಿ, ಜನ ಸಂಚಾರ ರಹಿತ ವಾತಾವರಣ. ಇಂತಹ ಸ್ಥಳದಲ್ಲಿ ಪುರಸಭೆ ಅಧಿಕಾರಿಗಳು ಹೈಟೆಕ್ ಸಾರ್ವಜನಿಕ ಶೌಚಾಲಯ ನಿರ್ಮಿಸಲು ಹೊರಟ್ಟಿದ್ದಾರೆ. ಇವರಿಗೆ ಏನು ಹೇಳೋಣ ಎನ್ನುತ್ತಾ ಆನೇಗುಂದಿ ಪ್ಲಾಟ್ ನಿವಾಸಿಗಳು ರಸ್ತೆಗಿಳಿದಿದ್ದಾರೆ.

ಎಸ್... ನವಲಗುಂದ ಪಟ್ಟಣದ ಲಾಲಗುಡಿ ಮಾರುತಿ ದೇವಸ್ಥಾನದ ಬಳಿ ಹೊಸ ನೀರಿನ ಟ್ಯಾಂಕ್ ನಿರ್ಮಿಸಲಾಗಿದೆ. ಅದರ ಪಕ್ಕಕ್ಕೆ ಈಗ ಹೈಟೆಕ್ ಶೌಚಾಲಯವನ್ನು ನಿರ್ಮಿಸಲು ಪುರಸಭೆ ಮುಂದಾಗಿದೆಯಂತೆ, ಜನ ಬೀಡಿತ ಪ್ರದೇಶದಲ್ಲಿ ನಿರ್ಮಿಸಬೇಕಾದ ಶೌಚಾಲಯವನ್ನು ಇಲ್ಲಿ ನಿರ್ಮಾಣ ಮಾಡಲು ಮುಂದಾಗಿರೋದು ಸ್ಥಳೀಯರ ವಿರೋಧ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ...

ಶೌಚಾಲಯ ನಿರ್ಮಾಣವಾದ್ರೆ ದುರ್ವಾಸನೆ ಹಾಗೂ ಕೊಳಚೆ ನಿರ್ಮಾಣವಾಗುತ್ತೆ, ಇಲ್ಲಿ ಶೌಚಾಲಯದ ಅವಶ್ಯಕತೆ ಇಲ್ಲಾ. ಹಾಗೂ ಸ್ಥಳೀಯ ಪುರಸಭೆ ಸದಸ್ಯರ ಗಮನಕ್ಕೆ ತಂದ್ರೆ ಉಡಾಫೆಯಾಗಿ ಮಾತನಾಡ್ತಾರೆ ಅನ್ನೋದು ಸ್ಥಳೀಯರ ಆರೋಪ.

ಇಲ್ಲಿ ದೇವಸ್ಥಾನಗಳು ಹಾಗೂ ಗಾರ್ಡನ್ ನಿರ್ಮಾಣವಾಗೋದ್ರಿಂದ ಸಾರ್ವಜನಿಕರಿಗೆ ಸಮಸ್ಯೆ ಆಗುತ್ತೆ ಅನ್ನೋದು ಸ್ಥಳೀಯರ ವಾದ. ಅದೇನೇ ಇರಲಿ ಪುರಸಭೆ ಅಧಿಕಾರಿಗಳು ಸ್ಥಳೀಯರ ಸಮಸ್ಯೆಗೆ ಸ್ಪಂದಿಸಬೇಕು ಹಾಗೂ ಶೌಚಾಲಯದ ಅವಶ್ಯಕತೆ ಇದ್ದಲ್ಲಿ ನಿರ್ಮಾಣ ಮಾಡಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.

ವಿನೋದ ಇಚ್ಚಂಗಿ, ಪಬ್ಲಿಕ್ ನೆಕ್ಸ್ಟ್ ನವಲಗುಂದ

Edited By :
Kshetra Samachara

Kshetra Samachara

26/07/2022 05:37 pm

Cinque Terre

18.64 K

Cinque Terre

0

ಸಂಬಂಧಿತ ಸುದ್ದಿ