ಕುಂದಗೋಳ: ಪಟ್ಟಣ ಪಂಚಾಯಿತಿ ಅಧಿಕಾರಿಗಳೇ ಕುಂದಗೋಳದ ಜನ ಬಳಸಿದ ನೀರು ಎಪಿಎಂಸಿ ಪ್ರಾಂಗಣ ಚರಂಡಿ ಮೂಲಕ ಹಾಯ್ದು ಗುಡೇನಕಟ್ಟಿ ದಾರಿ ಸೇರಿ ಇಳಿಜಾರಿನ ಮುಳ್ಳಹಳ್ಳಿ ದಾರಿಯಲ್ಲಿ ಶೇಖರಣೆಯಾಗಿ ಸಂಚಾರಕ್ಕೆ ಸಂಚಕಾರ ತಂದಿದೆ ಎನ್ನಲಾಗಿದೆ.
ಈ ಬಗ್ಗೆ ಸ್ವತಃ ರೈತರೇ ಪಬ್ಲಿಕ್ ನೆಕ್ಸ್ಟ್‌ಗೆ ವೀಡಿಯೋ ಕಳುಹಿಸಿ ನಿತ್ಯ ಮುಳ್ಳಹಳ್ಳಿ ದಾರಿಯಲ್ಲಿ ರೈತಾಪಿ ಚಟುವಟಿಕೆಗೆ ಟ್ರ್ಯಾಕ್ಟರ್ ಚಕ್ಕಡಿ ಎತ್ತು ತೆಗೆದುಕೊಂಡು ಹೋಗಲು ರಸ್ತೆ ಮೇಲೆ ಕಿರು ಹಳ್ಳದಂತೆ ಹರಿಯುವ ಕಲುಷಿತ ನೀರು ಸಮಸ್ಯೆ ತಂದಿದ್ದು, ನೀರಿನಲ್ಲಿ ತ್ಯಾಜ್ಯ ವಸ್ತುಗಳು ಸಹ ತೇಲಿ ಬರುತ್ತಿವೆ ಎನ್ನುತ್ತಿದ್ದಾರೆ.
ಕುಂದಗೋಳ ಪಟ್ಟಣ, ಗುಡೇನಕಟ್ಟಿ ಜನರು ಈ ದಾರಿಗೆ ಹೊಂದಿಕೊಂಡು ಕೃಷಿ ಭೂಮಿ ಹೊಂದಿದ್ದು ಓಡಾಟ ಕಷ್ಟವಾಗಿದೆ ಎನ್ನುತ್ತಿದ್ದಾರೆ. ಮಳೆಗಾಲ ಬೇಸಿಗೆಕಾಲ ಯಾವುದೇ ಇರಲಿ ಇಲ್ಲಿ ಹರಿಯುವ ನೀರಿನ ಪ್ರಮಾಣ ಕಡಿಮೆ ಆಗದೆ ನಿತ್ಯ ಕೃಷಿ ಚಟುವಟಿಕೆ ಅರಸಿ ಜಮೀನಿಗೆ ಸಾಗುವ ರೈತರು ಕಲುಷಿತ ನೀರಲ್ಲೇ ಕಾಲಿಟ್ಟು ಸಾಗಬೇಕಾದ ಅನಿವಾರ್ಯ ಪರಿಸ್ಥಿತಿಗೆ ಪರ್ಯಾಯ ಮಾರ್ಗ ನೀಡಬೇಕಿದೆ.
Kshetra Samachara
18/06/2022 05:03 pm