ಅಳ್ನಾವರ: ಆರೋಗ್ಯದ ಹಿತ ದೃಷ್ಟಿಯಿಂದ ಸಣ್ಣ ನೀರಾವರಿ ಇಲಾಖೆ ಯೋಜನೆ ಅನುಸಾರ ಅಳ್ನಾವರ ತಾಲೂಕಿನ ಅಂಬೋಳ್ಳಿ ಗ್ರಾಮದಲ್ಲಿ ಸುಮಾರು ಮೂರು ವರ್ಷದ ಹಿಂದೆ ಒಂದು ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಯಾಯಿತು. ಆದರೆ ಇದು ಕೇವಲ ಹೆಸರಿಗಷ್ಟೇ ಎಂಬುದು ಎದ್ದು ಕಾಣುತ್ತಿದೆ. ಪ್ರಾರಂಭವಾದ ಕೆಲವು ದಿನಗಳವರೆಗೆ ಮಾತ್ರ ನೀರು ಕೊಟ್ಟ ಶುದ್ಧ ನೀರಿನ ಘಟಕವು ಮತ್ತೆ ಅದರಿಂದ ನೀರು ಬಂದದ್ದೇ ಇಲ್ಲ.
ಇದಕ್ಕೆ ಸಂಬಂಧ ಪಟ್ಟ ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ಆಗಲಿ,ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಯಾಗಲಿ, ಇತ್ತ ಕಡೆ ತಲೆಹಾಕಿಲ್ಲ. ಹೀಗೆ ಆದರೆ ಹಳ್ಳಿಯ ಜನ ಶುದ್ಧ ಕುಡಿಯುವ ನೀರನ್ನ ಕಾಣೋದ್ಯಾವಾಗ?ಶುದ್ಧ ನೀರನ್ನ ಕುಡಿಯೋದ್ಯಾವಾಗ? ಆರೋಗ್ಯವಾಗಿ ಇರೋದ್ಯಾವಾಗ?
ಮಾನ್ಯ ಪಿಡಿಓ ಸಾಹೇಬರೇ ದಯವಿಟ್ಟು ಸ್ವಲ್ಪ ಬಿಡುವು ಮಾಡಿಕೊಂಡು ಅಂಬೋಳ್ಳಿ ಹಳ್ಳಿಯ ಪರಿಸ್ಥಿತಿ ಸ್ವಲ್ಪ ನೋಡಿ. ನಿಮ್ಮ ಪಂಚಾಯಿತಿಯಿಂದ ಕೇವಲ ಒಂದೇ ಕಿ.ಮೀ. ದೂರ ಇರೋದು..ಅಂಬೋಳ್ಳಿ ಜನತೆಗೆ ಶುದ್ಧ ಕುಡಿಯುವ ನೀರನ್ನ ಒದಗಿಸಿ ಪುಣ್ಯ ಕಟ್ಕೊಳ್ಳಿ.
ಮಹಾಂತೇಶ ಪಠಾಣಿ, ಪಬ್ಲಿಕ್ ನೆಕ್ಸ್ಟ್, ಅಳ್ನಾವರ
Kshetra Samachara
11/06/2022 03:01 pm