ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿಯಲ್ಲಿ ಬ್ಯಾನರ್ ಸಂಘರ್ಷ: ನೀತಿ ಸಂಹಿತೆ ಉಲ್ಲಂಘನೆ ಆರೋಪ, ಪ್ರತ್ಯಾರೋಪ

ಕಲಘಟಗಿ: ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ ಬ್ಯಾನರ್ ಸಂಘರ್ಷ ತಾರಕಕ್ಕೆ ಏರಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರ ಆರೋಪ ಪ್ರತ್ಯಾರೋಪ ನಡೆದಿದೆ.

ಹೌದು.. ವಿಧಾನ ಪರಿಷತ್ ಪಶ್ಚಿಮ ಶಿಕ್ಷಕರ ಕ್ಷೇತ್ರದ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಿದ್ದರೂ ರಾಜಕೀಯ ಪಕ್ಷಗಳು ನೀತಿಸಂಹಿತೆ ಉಲ್ಲಂಘಿಸಿ ಬ್ಯಾನರ್ ಹಾಕಿರುವ ಕುರಿತು ಪರಸ್ಪರ ಕೆಸರೆರಚಾಟ ನಡೆದಿದ್ದು, ಮಾಜಿ ಸಚಿವ ಸಂತೋಷ್ ಲಾಡ್ ಬ್ಯಾನರ್ ತೆಗೆದಿದ್ದ ತಾಲ್ಲೂಕು ಆಡಳಿತ.

ಕಾಂಗ್ರೆಸ್ ನವರು ಕ್ರಿಕೆಟ್ ಟೂರ್ನಾಮೆಂಟ್ ಆಯೋಜನೆ ಸಂಬಂಧ ಹಾಕಿದ್ದ ಬ್ಯಾನರ್ ತೆರವು ಮಾಡಿದ್ದಾರೆ. ಆದರೆ ಬಿಜೆಪಿಯ ಬ್ಯಾನರ್ಗಳನ್ನು ತೆರವು ಮಾಡದೇ ಇರುವುದರಿಂದ ಆಕ್ರೋಶಗೊಂಡಿದ್ದು, ಕೂಡಲೇ ತೆರವು ಮಾಡುವಂತೆ ಒತ್ತಾಯಿಸಿದರು.

ಇನ್ನೂ ತಹಶೀಲ್ದಾರ್ ಕಚೇರಿ ಎದುರು ಕಾಂಗ್ರೆಸ್ ಮುಖಂಡರ ಪ್ರತಿಭಟನೆ ನಡೆಸಿದ್ದು, ಬಿಜೆಪಿ ಬ್ಯಾನರ್ ತೆರವು ಮಾಡದೆ ಕಾಂಗ್ರೆಸ್ ಬ್ಯಾನರ್ ಮಾತ್ರ ತೆರವು ಮಾಡಲಾಗಿದೆ ಎಂದು ಆರೋಪಿಸಿದ ಕೈ ಕಾರ್ಯಕರ್ತರು, ಪರಿಷತ್ ಚುನಾವಣೆ ನೀತಿ ಸಂಹಿತೆ ಕಾರಣ ಏರ್ಪಟ್ಟಿರುವ ಬ್ಯಾನರ್ ಸಂಘರ್ಷಕ್ಕೆ ಮತ್ತೊಂದು ಅಡಿಪಾಯ ಹಾಕಿದರು.

Edited By :
Kshetra Samachara

Kshetra Samachara

10/06/2022 02:52 pm

Cinque Terre

17.38 K

Cinque Terre

0

ಸಂಬಂಧಿತ ಸುದ್ದಿ