ಕುಂದಗೋಳ : ಪಟ್ಟಣ ಪಂಚಾಯಿತಿಯಲ್ಲಿ ಕಳೆದ 39 ವರ್ಷಗಳಿಂದ ಪೌರಕಾರ್ಮಿಕರಾಗಿ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿದ ಚಂದ್ರಶೇಖರ ಅ ಬೇವಿನಮರದ ದಂಪತಿಗಳನ್ನು ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು.
ಹೌದು ! ಪಟ್ಟಣ ಪಂಚಾಯಿತಿ ಅಧ್ಯಕ್ಷ ಪ್ರಕಾಶ್ ಕೋಕಾಟೆ ಹಾಗೂ ಉಪಾಧ್ಯಕ್ಷ ಹಣುಮಂತಪ್ಪ ರಣತೂರ ಹಾಗೂ ಸರ್ವ ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಚಂದ್ರಶೇಖರ ಅ ಬೇವಿನಮರದ ಇವರನ್ನು ಸನ್ಮಾನ ಮಾಡಿ ಸ್ಮರಣಿಕೆ ನೀಡಿ ಗೌರವಿಸಿದರು.
ಪಟ್ಟಣ ಪಂಚಾಯಿತಿಯಲ್ಲಿ ಪೌರ ಕಾರ್ಮಿಕರಾಗಿ ಸೇವೆ ನೀಡಿದ ಚಂದ್ರಶೇಖರ ಬೇವಿನಮರದ ಅವರು ಸೇವಾ ದಿನಗಳ ಕರ್ತವ್ಯ ಪ್ರಜ್ಞೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರು.
Kshetra Samachara
06/06/2022 12:49 pm