ಕುಂದಗೋಳ : ಈ ಸರ್ಕಾರಿ ಶಾಲೆಗಳ ಶಿಕ್ಷಣದಷ್ಟೇ ಪ್ರಮುಖವಾಗಿ ಶಾಲಾ ನೈರ್ಮಲ್ಯವೂ ಮುಖ್ಯ. ಇಲ್ಲೊಂದು ಶಾಲೆಯಲ್ಲಿ ಅಂತಹ ನೈರ್ಮಲ್ಯ ಮಾಯವಾಗಿ ಅನೈರ್ಮಲ್ಯ ತಲೆದೋರಿದೆ.
ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆ ಆವರಣ, ಶೌಚಾಲಯ ಕುಡುಕರ ಅಡ್ಡೆಯಾಗಿ ಮಾರ್ಪಟ್ಟಿವೆ. ಶಾಲೆ ಆವರಣದ ಇಕ್ಕಟ್ಟಾದ ಪಾಳು ಕೊಠಡಿ, ಶೌಚಾಲಯದಲ್ಲಿ ಎಲ್ಲಿ ನೋಡಿದರಲ್ಲಿ ಸಾರಾಯಿ ಬಾಟಲಿ, ಗ್ಲಾಸ್, ಪ್ಲಾಸ್ಟಿಕ್ ಗಳದ್ದೆ ಕಾರುಬಾರು.
ಇನ್ನೂ ಶಾಲಾ ಕೊಠಡಿ ಒಳಗೆ ಹೋದ್ರೆ ಮುಗಿದು ಹೋಯ್ತು. ಅಲ್ಲಿನ ಧೂಳು, ಮಳೆ ಬಂದರೆ ಸೋರುವ ಗೋಡೆ, ಮೇಲ್ಛಾವಣಿ ನೋಡಿದ್ರೆ ಮಕ್ಕಳ ಪರಿಸ್ಥಿತಿ ಅಯ್ಯೋ ಎನಿಸುತ್ತಿದೆ.
ಅದರಂತೆ ಇದೇ ಯರಗುಪ್ಪಿಯ ಸರ್ಕಾರಿ ಹಿರಿಯ ಹೆಣ್ಣು ಮಕ್ಕಳ ಶಾಲೆ ಶೌಚಾಲಯಕ್ಕೆ ಮುರುಕು ಬಾಗಿಲು ಇದೆ. ಪಾಪಾ ಮಕ್ಕಳ ಪರಿಸ್ಥಿತಿ ಏನು ? ಶೌಚಾಲಯದ ತುಂಬಾ ಅನೈರ್ಮಲ್ಯ ಹಾಗೂ ಶಾಲಾ ಆವರಣದಲ್ಲಿರೋ ನೀರಿನ ಅರವಟಿಗೆಯಲ್ಲಿ ಮರದ ತ್ಯಾಜ್ಯ ಬಿದ್ದು ಕಲುಷಿತ ನೀರು ಸಂಗ್ರಹವಾಗಿ ರೋಗದ ಕಾರ್ಖಾನೆ ಆಗಿ ಮಾರ್ಪಟ್ಟಿದೆ. ಈ ಅವ್ಯವಸ್ಥೆ ನಡುವೆ ಮಕ್ಕಳ ತರಗತಿಗಳು ನಡೆದು ಈಗ ರಜೆ ಸಿಕ್ಕಿದೆ.
ಈ ಎಲ್ಲಾ ಪರಿಸ್ಥಿತಿಯನ್ನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮರೆತು ಕೂತಿದ್ದಾರಾ ? ಎಂಬುದು ಜನರ ಪ್ರಶ್ನೆ ? ಶಾಲೆಗಳು ಪುನಃ ಬಾಗಿಲು ತೆರೆದ್ರೇ ಇದೇ ದುರ್ವಾಸನೆ ನಡುವೆ ಬೋಧನೆ ನಡೆಯುತ್ತಾ ಕಾದು ನೋಡಬೇಕಿದೆ.
-ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ
Kshetra Samachara
04/05/2022 02:34 pm