ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ರಸ್ತೆ ಪೂರ್ತಿ ತಗ್ಗು ಗುಂಡಿಯದ್ದೇ ದರ್ಬಾರು : ಗಾಢ ನಿದ್ರೆಯಲ್ಲಿ ಅಧಿಕಾರಿಗಳು, ಶಾಸಕರು

ಕಲಘಟಗಿ: ಪಟ್ಟಣದ ಮುಂಡಗೋಡ ರಸ್ತೆಯಲ್ಲಿ ಯಾವ ಪ್ರಮಾಣದ ದೊಡ್ಡ ದೊಡ್ಡ ತಗ್ಗು ಗುಂಡಿಗಳು ಬಿದ್ದಿವೆ ಅಂದ್ರೆ ರಸ್ತೆಯಲ್ಲಿ ಗುಂಡಿಗಳೋ, ಗುಂಡಿಗಳ ನಡುವೆ ರಸ್ತೆ ಇದೆಯೋ ಎಂಬ ಗೊಂದಲವುಂಟಾಗುತ್ತದೆ. ಗುಂಡಿಗೆ ಗಟ್ಟಿ ಇದ್ದ ಸವಾರರು ಮಾತ್ರ ತಮ್ಮ ಜೀವ ಕೈಯಲ್ಲಿ ಹಿಡಿದುಕೊಂಡು ಈ ರಸ್ತೆಯಲ್ಲಿ ಓಡಾಡಬೇಕಾಗಿದೆ.

ಪಟ್ಟಣದ ಬಮ್ಮಿಗಟ್ಟಿ ಕ್ರಾಸ್ ಬಳಿ ಮುಂಡಗೋಡಗೆ ಹೋಗುವ ಮಾರ್ಗದಲ್ಲಿ ಈ ರೀತಿ ದೊಡ್ಡ ಪ್ರಮಾಣದ ಗುಂಡಿಗಳು ಬಿದ್ದಿದ್ದು ಬಸ್ ಹಾಗೂ ಲಾರಿ ಸವಾರರು ಇಲ್ಲಿ ಹೋಗಲು ಹರಸಾಹಸ ಪಡುತ್ತಿದ್ದಾರೆ. ಇದರಿಂದ ಇಲ್ಲಿ ದಿನನಿತ್ಯ ಟ್ರಾಫಿಕ್ ಜಾಮ್ ಆಗುತ್ತಿದ್ದು ಸಾರ್ವಜನಿಕರು ಪರದಾಡುವಂತಾಗಿದೆ.

ಕೂಡಲೇ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಶಾಸಕ ಸಿ.ಎಂ ನಿಂಬಣ್ಣವರ್ ಇತ್ತಕಡೆ ಗಮನ ಹರಿಸಿ ರಸ್ತೆಯನ್ನು ದುರಸ್ತಿ ಮಾಡಿಸಲು ಕ್ರಮಕೈಗೊಳ್ಳಬೇಕು. ಇಲ್ಲವಾದರೆ ಪ್ರತಿಭಟನೆ ಮಾಡಬೇಕಾದೀತು ಎಂದು ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ.

ವರದಿ: ಉದಯ ಗೌಡರ, ಪಬ್ಲಿಕ್ ನೆಕ್ಸ್ಟ್

Edited By : Manjunath H D
Kshetra Samachara

Kshetra Samachara

25/04/2022 12:05 pm

Cinque Terre

26.78 K

Cinque Terre

1

ಸಂಬಂಧಿತ ಸುದ್ದಿ