ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಏಪ್ರಿಲ್ 28, 29ರಂದು ಧಾರವಾಡದಲ್ಲಿ ರಾಜ್ಯಮಟ್ಟದ ರೈತ-ಕಾರ್ಮಿಕರ ಸಮ್ಮೇಳನ

ಹುಬ್ಬಳ್ಳಿ: ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ವತಿಯಿಂದ ಏಪ್ರಿಲ್ 28, 29 ರಂದು ರಾಜ್ಯಮಟ್ಟದ ರೈತರು ಮತ್ತು ಕಾರ್ಮಿಕರ ಸಮ್ಮೇಳನವನ್ನು ಧಾರವಾಡದ ಕಡಪಾ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಸಮಿತಿಯ ಅಧ್ಯಕ್ಷ ಡಾ. ಟಿ.ಎಸ್ ಸುನೀತ್ ಕುಮಾರ್ ಹೇಳಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ಏ.28 ರಂದು ಬೆಳಿಗ್ಗೆ 12 ಕ್ಕೆ ಬಂಡಾಯ ಸಾಹಿತಿ ನಾಡೋಜ ಬರಗೂರು ರಾಮಚಂದ್ರಪ್ಪ ಸಮ್ಮೇಳನವನ್ನು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಾಹಿತಿಗಾಳಾದ ಅಲ್ಲಮ್ಮಪ್ರಭು ಬೆಟ್ಟದೂರು ಆಗಮಿಸಲಿದ್ದಾರೆ. ಮುಖ್ಯ ಭಾಷಣಕಾರರಾಗಿ ಆಲ್ ಇಂಡಿಯಾ ಕೃಷಕ್ ಖೇತ್ ಮಜ್ದೂರ್ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಸತ್ಯವಾನ್ ಮಾತನಾಡಲಿದ್ದಾರೆ ಎಂದರು.

ಎರಡು ದಿನಗಳ ರಾಜ್ಯಮಟ್ಟದ ರೈತ ಕೃಷಿ ಕಾರ್ಮಿಕರ ಸಂಘಟನೆಯಲ್ಲಿ ರಾಜ್ಯದ ರೈತರು ಎದುರಿಸುತ್ತಿರುವ ಗಂಭೀರ ಸಮಸ್ಯೆಗಳ ಕುರಿತು ಕೂಲಂಕುಷವಾಗಿ ಚರ್ಚೆ, ಅವುಗಳ ಕಾರಣ ಮತ್ತು ಪರಿಹಾರಗಳ ಕುರಿತು ಚರ್ಚಿಸಲಾಗುವುದು, ತದನಂತರ ರೈತರ ಕೃಷಿಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಲು ನಿಟ್ಟಿನಲ್ಲಿ ಕಾರ್ಯಕ್ರಮ ಮತ್ತು ಹೋರಾಟಗಳನ್ನು ರೂಪಿಸಲು ಯೋಜಿಸಲಾಗುವುದು ಎಂದು ಸುನೀತ್ ಕುಮಾರ ಹೇಳಿದರು.

Edited By :
Kshetra Samachara

Kshetra Samachara

16/04/2022 01:37 pm

Cinque Terre

28.31 K

Cinque Terre

0

ಸಂಬಂಧಿತ ಸುದ್ದಿ