ಕುಂದಗೋಳ : ತಾಲೂಕಿನ ಅಲ್ಲಾಪೂರ ಗ್ರಾಮದ ಕುಡಿಯುವ ನೀರಿನ ಕೆರೆಯನ್ನು ಸಮಗ್ರ ಕೆರೆ ಅಭಿವೃದ್ಧಿ ಯೋಜನೆಯಡಿ ಅಭಿವೃದ್ಧಿ ಪಡಿಸುವಂತೆ ಗ್ರಾಮಸ್ಥರು ಎಷ್ಟೆಲ್ಲಾ ಪ್ರಯತ್ನಿಸಿದ್ರೂ ಪ್ರಯೋಜನವಾಗ್ತಿಲ್ಲ..ಗ್ರಾಮೀಣಾಭಿವೃದ್ಧಿ ಸಚಿವರು, ಮುಖ್ಯಮಂತ್ರಿಗಳ ಕಾರ್ಯಾಲಯದಿಂದ ಪತ್ರ ತಂದು, ಜಿಲ್ಲಾ ಪಂಚಾಯತ್ ಅಧಿಕಾರಿಗಳಿಗೆ ಮನವಿ ಮಾಡಿದ ಗ್ರಾಪಂ ಸದಸ್ಯ ಹಾಗೂ ಗ್ರಾಮಸ್ಥರಿಗೆ ನಿರಾಸೆ ಆಗಿದೆ.
ಈಗಾಗಲೇ ಕೆರೆ ಸುತ್ತ ಕಸ ಬೆಳೆದು, ಕುಡುಕರ ಅಡ್ಡೆಯಾಗಿ, ಕೆರೆ ಸುತ್ತಲೂ ಭದ್ರತೆ ಇರದೆ ಅನೇಕ ಸಾವು ನೋವಿಗೂ ಕಾರಣವಾಗಿದೆ. ಅಲ್ಲಾಪೂರದ ಕೆರೆ ಅಭಿವೃದ್ಧಿಗೆ ನರೇಗಾ ಯೋಜನೆಯಡಿ ಕ್ರಮ ಕೈಗೊಳ್ಳಿ ಎಂದು ಜಿಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಹೇಳಿದ್ದಾರೆ. ಆದ್ರೆ ಜಿಪಂ ಅಧಿಕಾರಿಗಳ ಆದೇಶಕ್ಕೆ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಸಹಕಾರ ನೀಡದಿರುವ ಕಾರಣ ಕೆರೆ ಅಭಿವೃದ್ಧಿ ಮೂಲೆಗುಂಪಾಗಿದೆ.
ಒಟ್ಟಾರೆ ಗ್ರಾಮಸ್ಥರು ತಮ್ಮೂರಿನ ಕೆರೆ ಅಭಿವೃದ್ಧಿಗಾಗಿ ಬೆಂಗಳೂರು, ಧಾರವಾಡ ಅಲೆದಾಡಿ ಜನಪ್ರತಿನಿಧಿಗಳನ್ನು ಅಧಿಕಾರಿಗಳನ್ನು ಭೇಟಿಯಾಗಿ ಮನವಿ ಮಾಡಿದ್ರೂ ಏನೂ ಪ್ರಯೋಜನವಾಗ್ತಿಲ್ಲ. ಈ ವಿಳಂಬಕ್ಕೆ ಕಾರಣ ಏನು ಅನ್ನೋದಕ್ಕೆ ಅಧಿಕಾರಿಗಳೇ ಉತ್ತರಿಸಬೇಕು.
ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್, ಕುಂದಗೋಳ
Kshetra Samachara
26/03/2022 03:21 pm