ಧಾರವಾಡ: ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಕುಡಿಯುವ ನೀರಿನ ಯೋಜನೆ, ಪ್ರಧಾನಿ ಮೋದಿ ಅವರು ಜಲಜೀವನ್ ಮಶಿನ್ ಅಡಿಯಲ್ಲಿ ಪ್ರತಿಯೊಂದು ಮನೆಗೆ ಕುಡಿಯುವ ನೀರು ಸಿಗಬೇಕು, ಜಲಜೀವನ್ ಯೋಜನೆ ತಂದರು ಕೂಡಾ ಅದೆನೋ ಕರ್ಮವೋ ಏನೋ.. ಆ ಗ್ರಾಮದ 50 ಕುಟುಂಬಗಳು ಕುಡಿಯುವ ನೀರಿನ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಅಷ್ಟಕ್ಕೂ ಎನಿದು ಸ್ಟೋರಿ ಅಂತೀರಾ? ತೋರಿಸ್ತೀವಿ ನೋಡಿ
ಯೆಸ್..ಧಾರವಾಡ ತಾಲೂಕಿನ ನಿಗದಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಬೆನಕನಕಟ್ಟಿ ಗ್ರಾಮದಲ್ಲಿ 50ಕ್ಕೂ ಹೆಚ್ಚು ಮನೆಗಳಲ್ಲಿ ಕುಟುಂಬಗಳು ವಾಸವಾಗಿವೆ. ಇವರಿಗೆ ಇಲ್ಲಿಯವರೆಗೂ ಕುಡಿಯುವ ನೀರಿನ ಸೌಲಭ್ಯ ಸಿಕ್ಕಿಲ್ಲ. ಪಂಚಾಯತಿಗೆ ಮನೆಯ ಟ್ಯಾಕ್ಸ್ ಭರಿಸುವ ಜೊತೆಗೆ ವಿದ್ಯುತ್ ಬಿಲ್, ನೀರಿನ ಬಿಲ್ ಕಟ್ಟುತ್ತಾ ಬಂದಿದ್ದಾರೆ. ಸರ್ಕಾರ ಜಲಜೀವನ್ ಮಿಷನ್ ಅಡಿಯಲ್ಲಿ ಪ್ರತಿ ಮನೆಮನೆಗೆ ಗಂಗೆ ಎಂಬ ಯೋಜನೆ ಜಾರಿಗೆ ತಂದಿದೆ. ಸದ್ಯ ಗ್ರಾಮ ಪಂಚಾಯತಿ ಮಟ್ಟದಲ್ಲಿ ಕಾಮಗಾರಿಗಳನ್ನ ಕೈಗೆತ್ತಿಕೊಳ್ಳಲಾಗಿದೆ. ಆದರೆ ಈ 50 ಕುಟುಂಬಗಳಿಗೆ ಈ ನೀರಿನ ಯೋಜನೆ ಮರೀಚಿಕೆ ಆಗುತ್ತಿದೆ. ಒಂದು ವೇಳೆ ನಮಗೆ ನೀರು ಕೊಡದೇ ಹೋದ್ರೆ ನಾವೆಲ್ಲ ಆತ್ಮಹತ್ಯೆ ಮಾಡಿಕ್ಕೊಳ್ಳುತ್ತೇವೆ ಎಂದು ನೊಂದ ಗ್ರಾಮಸ್ಥರು ಹೇಳುತ್ತಿದ್ದಾರೆ..
ಇನ್ನು ಧಾರವಾಡ ಜಿಲ್ಲೆಯಾದ್ಯಂತ ಎಲ್ಲ ತಾಲೂಕಿನಲ್ಲಿ ಮನೆಮನೆಗೆ ಗಂಗೆ ಎಂಬ ಯೋಜನೆ ಅಡಿಯಲ್ಲಿ ಈಗಾಗಲೇ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆಯಿಂದ ಕಾಮಗಾರಿ ಕೈಗೆತ್ತಿಕ್ಕೊಳ್ಳಲಾಗಿದೆ. ಇನ್ನು ಅಧಿಕಾರಿಗಳು ಯಾರದ್ದೋ ಮಾತು ಕೇಳಿ ಈ ರೀತಿ ಮಾಡ್ತಿದ್ದಾರಾ? ಎಂಬ ಅನುಮಾನ ಕಾಡುತ್ತಿದೆ. ಒಟ್ನಲ್ಲಿ ಗ್ರಾಮದ 50 ಕುಟುಂಬಗಳಿಗೆ ಕುಡಿಯುವ ನೀರಿನ ಸೌಲಭ್ಯ ಕೊಡಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ...
ಮೂಲಭೂತ ಹಕ್ಕಾಗಿರುವ ಕುಡಿಯುವ ನೀರು ಈ ಕುಟುಂಬಗಳಿಗೆ ಸಿಗದಿರುವುದು ಸರ್ಕಾರದ ವೈಫಲ್ಯವೇ ಸರಿ. ಕೂಡಲೇ ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನಹರಿಸಿ ನಮಗೆ ನ್ಯಾಯ ಕೊಡಿಸಬೇಕೆಂದು ಬೆನಕನಕಟ್ಟಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
Kshetra Samachara
09/03/2022 08:17 am