ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಗಲೀಜು ನಿಲ್ದಾಣ ಇದುವೇ ನಮ್ಮ ನವಲಗುಂದ ಬಸ್ ನಿಲ್ದಾಣ!

ನವಲಗುಂದ: ನಮ್ಮ ಅಧಿಕಾರಿಗಳು ಕೆಲಸ ಮಾಡ್ತಾ ಇದ್ದೀವಿ ಅಂತಾ ತೋರಿಸ್ತಾರೆ ಅಷ್ಟೇ. ಆದರೆ, ಕೆಲಸ ಮಾತ್ರ ಮಾಡಲ್ಲ. ಇದಕ್ಕೆ ನವಲಗುಂದ ಬಸ್ ನಿಲ್ದಾಣದ ಆವರಣ ಉತ್ತಮ ಉದಾಹರಣೆ. ಹೀಗಂತ ಈಗ ಸಾರ್ವಜನಿಕರು ದೂರುತಿದ್ದಾರೆ.

ಒಂದಲ್ಲ, ಎರಡಲ್ಲ ಹಲವು ಬಾರಿ ಬಸ್ ನಿಲ್ದಾಣದ ಸ್ವಚ್ಛತೆಗಾಗಿ ನಿಮ್ಮ ಪಬ್ಲಿಕ್ ನೆಕ್ಸ್ಟ್ ಸುದ್ದಿ ಪ್ರಕಟಿಸಿದೆ. ಆದರೂ ಸಹ ಬಸ್ ನಿಲ್ದಾಣದ ಅಧಿಕಾರಿಗಳು ನಿರ್ವಹಣೆಯತ್ತ ಮನಸು ಮಾಡಿಲ್ಲ. ಬಸ್ ನಿಲ್ದಾಣದ ಆವರಣ ಮೂತ್ರ ವಿಸರ್ಜನೆ ಮತ್ತು ಕೊಳಚೆಯಿಂದ ಗಬ್ಬುನಾತ ಹೊಡೆಯುತ್ತಿದೆ.

ಅಷ್ಟೇ ಅಲ್ಲದೆ ಡ್ರೈನೇಜ್ ಸೋರಿಕೆ ಆಗಿ ಸಂಪೂರ್ಣ ಬಸ್ ನಿಲ್ದಾಣ ಗಬ್ಬು ವಾಸನೆ ವಾತಾವರಣವನ್ನ ಹಾಳು ಮಾಡ್ತಾನೆ ಇದೆ. ಹೇಳಿದಾಗ ಮಾತ್ರ ಕೆಲಸ ಮಾಡುವ ಹಾಗೇ ನಟಿಸುವ ಅಧಿಕಾರಿಗಳ ವಿರುದ್ಧ ನವಲಗುಂದ ಮಂದಿ ಈಗ ಹಿಡಿ ಶಾಪ ಹಾಕುತ್ತಿದ್ದಾರೆ.

ವಿನೋದ ಇಚ್ಚಂಗಿ, ಪಬ್ಲಿಕ್ ನೆಕ್ಸ್ಟ್ ನವಲಗುಂದ

Edited By : Shivu K
Kshetra Samachara

Kshetra Samachara

24/02/2022 08:24 am

Cinque Terre

37.26 K

Cinque Terre

1

ಸಂಬಂಧಿತ ಸುದ್ದಿ