ನವಲಗುಂದ: ದಿನಕ್ಕೆ ನೂರಾರು ಜನರು ಸಂಚರಿಸುವ ಪ್ರಮುಖ ರಸ್ತೆ ಇದು. ಈ ರಸ್ತೆಯ ದುರಸ್ತಿ ಯಾವಾಗ ಆಗುತ್ತೋ ಗೊತ್ತಿಲ್ಲ. ಆದರೆ ನಾವು ಈಗ ಮಾತಾಡುತ್ತಿರುವ ಸಮಸ್ಯೆ ರಸ್ತೆಯದ್ದಲ್ಲ. ರಸ್ತೆಯ ಬದಿಗಿರುವ ಬಾಗಿದ ಕಂಬಗಳ ದುಸ್ಥಿತಿಯ ಬಗ್ಗೆ.
ಇದು ನವಲಗುಂದ ಪಟ್ಟಣದ ಬಸವೇಶ್ವರ ನಗರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ. ಒಂದು ಸಣ್ಣ ವಸ್ತು ಬೇಕಾದರೂ ಸಹ ಬಸವೇಶ್ವರ ನಗರದಲ್ಲಿನ ಜನರು ಇದೇ ರಸ್ತೆಯಲ್ಲಿ ಮಾರುಕಟ್ಟೆಗೆ ಹೋಗಬೇಕು. ಇಂತಹ ರಸ್ತೆಯಲ್ಲಿ ಬಾಗಿದ ವಿದ್ಯುತ್ ಕಂಬಗಳು ಈಗ ಜನರ ಆತಂಕಕ್ಕೆ ಕಾರಣವಾಗಿವೆ. ವಾತಾವರಣ ಹದಗೆಟ್ಟು ಜೋರಾಗಿ ಗಾಳಿ, ಮಳೆ ಏನಾದರೂ ಬಂದ್ರೆ ಕಂಬಗಳು ನೆಲಕಚ್ಚುವ ಆತಂಕ ಎದುರಾಗಿದೆ.
ಕಳೆದ ಬಾರಿ ಸುರಿದ ಗಾಳಿ, ಮಳೆಗೆ ಪಟ್ಟಣದ ಅದೆಷ್ಟೋ ಕಂಬಗಳು ನೆಲಕಚ್ಚಿವೆ. ಈ ರೀತಿಯ ಅವಘಡ ಸಂಭವಿಸಿದ್ರೆ ಸಾರ್ವಜನಿಕರಿಗೆ ಸಂಕಷ್ಟ ಎದುರಾದ್ರೆ, ಇದಕ್ಕೆ ಯಾರು ಹೊಣೆ ? ಇನ್ನಾದ್ರೂ ಈ ರಸ್ತೆಯಲ್ಲಿನ ವಿದ್ಯುತ್ ಕಂಬಗಳ ನಿರ್ವಹಣೆಯತ್ತ ಅಧಿಕಾರಿಗಳು ಕೊಂಚ ಗಮನ ಹರಿಸಿ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕಾಗಿದೆ.
ವಿನೋದ ಇಚ್ಚಂಗಿ, ಪಬ್ಲಿಕ್ ನೆಕ್ಸ್ಟ್ ನವಲಗುಂದ
Kshetra Samachara
25/01/2022 02:13 pm