ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಸಾರಾಯಿ ಪೊಲೀಸ್ ವಶ

ಕುಂದಗೋಳ : ಅಕ್ರಮವಾಗಿ ಸಾರಾಯಿ ಮಾರಾಟ ಮಾಡುತ್ತಿದ್ದ ಮನೆಯೊಂದರ ಮೇಲೆ ದಾಳಿ ನಡೆಸಿದ ಪೊಲೀಸರು 2450 ರೂಪಾಯಿ ಮೌಲ್ಯದ ಸಾರಾಯಿ ಪಾಕೆಟ್ ವಶಪಡಿಸಿಕೊಂಡ ಘಟನೆ ಕಳೆದ ಶುಕ್ರವಾರ ನಡೆದಿದೆ.

ಹೌದು ! ಕುಂದಗೋಳ ತಾಲೂಕಿನ ಕಡಪಟ್ಟಿ ಗ್ರಾಮದ ಪ್ರಕಾಶ್ ಜಗದೇವಪ್ಪ ಗಿರಿಮಲ್ಲನವರ ಎಂಬಾತ ತನ್ನ ಸ್ವಂತ ಲಾಭಕೊಸ್ಕರವಾಗಿ ಅಕ್ರಮವಾಗಿ ಸಾರಾಯಿ ಮಾರಾಟ ಮಾಡುವ ವಿಷಯದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಕುಂದಗೋಳ ಗ್ರಾಮೀಣ ಪೊಲೀಸರು 2450 ರೂಪಾಯಿ ಮೌಲ್ಯದ 90 ಎಂಎಲ್'ನ 70 ಒರಿಜಿನಲ್ ಚಾಯ್ಸ್ ವಿಸ್ಕಿ ಪಾಕೆಟ್ ವಶಪಡಿಸಿಕೊಂಡಿದ್ದು ದಾಳಿ ವೇಳೆ ಆರೋಪಿ ಪರಾರಿಯಾಗಿದ್ದಾನೆ.

ಈ ಕುರಿತು ಕುಂದಗೋಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಮುಂದುವರಿದಿದೆ.

Edited By : Nirmala Aralikatti
Kshetra Samachara

Kshetra Samachara

04/01/2022 12:34 pm

Cinque Terre

11.44 K

Cinque Terre

0

ಸಂಬಂಧಿತ ಸುದ್ದಿ