ಕುಂದಗೋಳ : ಕುಂದಗೋಳ ತಾಲೂಕಿನನಲ್ಲಿ ಅದೆಷ್ಟೋ ಮನೆಗಳು ಹಾಗೂ ಜಮೀನುಗಳು ಅತಿವೃಷ್ಟಿಗೆ ಸಿಲುಕಿ ಹಾಳಾಗಿ ಹೋಗಿವೆ, ಇನ್ನೂ ಕುಂದಗೋಳ ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ಎಷ್ಟೋ ಮನೆಗಳು ಬಿದ್ದಿದ್ದರೂ ಸರ್ಕಾರ ತಾಲೂಕು ಆಡಳಿತ ಪರಿಹಾರ ಮಂಜೂರು ಮಾಡುತ್ತಿಲ್ಲ.
ಈ ಬಗ್ಗೆ ಕುಂದಗೋಳ ತಾಲೂಕ ಹಾಗೂ ಹಂಚಿನಾಳ ಗ್ರಾಮದಲ್ಲಿ ಮನೆ ಕಳೆದುಕೊಂಡವರಿಗೆ ಪರಿಹಾರ ನೀಡದಿದ್ರೇ ಜ.10 ರಿಂದ ತಹಶೀಲ್ದಾರ ಕಚೇರಿ ಎದುರು ನಿರಂತರ ಧರಣಿ ನಡೆಸುತ್ತೇವೆ ಎಂದು ತಹಶೀಲ್ದಾರ ಮೂಲಕ ರಾಜ್ಯ ಸರ್ಕಾರಕ್ಕೆ ಜೆಡಿಎಸ್ ಮುಖಂಡ ಹಜರತ್'ಅಲಿ ಜೋಡಮನಿ ಮನವಿ ಸಲ್ಲಿಸಿದರು.
Kshetra Samachara
03/01/2022 08:08 pm