ಕಲಘಟಗಿ: ಕಲಘಟಗಿ ತಾಲೂಕಿನ ಮುಕ್ಕಲ ಗ್ರಾಮದ ಜಾನಪದ ಕಾಷ್ಠ ಕಲಾವಿದ ರುದ್ರಪ್ಪ ಬಡಿಗೇರಗೆ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯಿಂದ 2020 ನೇ ಸಾಲಿನ ಗೌರವ ಪ್ರಶಸ್ತಿ ದೊರತಿದೆ. ಸುಮಾರು ಐದು ದಶಕಗಳಿಂದ ದ್ಯಾಮವ್ವ ಹಾಗೂ ದುರ್ಗೆಯರ ಮುರ್ತಿ ಕೆತ್ತನೆ ಹಾಗೂ ವಿಶಿಷ್ಟವಾದ ಅರಗು,ತವರು ಮಿಶ್ರಿತ ದೇಶಿ ಸಾಂಪ್ರದಾಯಿಕ ಬಣ್ಣ ಲೇಪನ ಮಾಡುವುದರ ಮೂಲಕ ಪರಿಚಿತರಾಗಿದ್ದರು.
ಕಾಷ್ಠ ಕಲೆ,ಶಿಲ್ಪಕಲೆ ಹಾಗೂ ರಥಶಿಲ್ಪ,ಕಲಘಟಗಿಯ ಸಾಂಪ್ರದಾಯಿಕ ಬಣ್ಣದ ತೊಟ್ಟಿಲು ನಿರ್ಮಾಣದ ಮೂಲಕ ಜಾನಪದ ಶಿಲ್ಪರಲ್ಲಿ ಹೆಸರುವಾಸಿಯಾಗಿದ್ದರು.ಇವರನ್ನ ಗುರುತಿಸಿ ಬೆಂಗಳೂರಿನ ವರ್ಣ ಆರ್ಟ್ ಗ್ಯಾಲರಿ,ಕನ್ನಡ ಭವನದಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಗೌರವ ಪ್ರಶಸ್ತಿ ನೀಡಿ ಸನ್ಮಾನಿಸಿದೆ.ಇದರಿಂದ ಧಾರವಾಡ, ಕಲಘಟಗಿ,ಮುಕ್ಕಲ ಗ್ರಾಮಸ್ಥರಿಗೆ ಹೆಮ್ಮೆತರುವ ಸಂಗತಿಯಾಗಿದ್ದು,ಎಲ್ಲರು ರುದ್ರಪ್ಪ ಬಡಿಗೇರ ಅವರಿಗೆ ಅಭಿನಂದಿಸಿದ್ದಾರೆ.
Kshetra Samachara
30/12/2021 09:54 am