ಪಬ್ಲಿಕ್ ನೆಕ್ಸ್ಟ್ ವಿಶೇಷ: ಈರಣ್ಣ ವಾಲಿಕಾರ
ಹುಬ್ಬಳ್ಳಿ- ರಾಜ್ಯ ರೈಲ್ವೆ ಪೊಲೀಸರು ವಾಸಿಸುವಂತಹ ಕ್ವಾಟರ್ಸ್ ಇದೀಗ ಕಾಡಿನಂತಾಗಿ ಕುಡುಕರ ಅಡ್ಡೆಯಾಗಿದೆ. ಹೇಳುವವರೂ ಇಲ್ಲ ಕೇಳುವವರೂ ಇಲ್ಲದ ಮನೆ ಹಾಳಾದಂತಾಯಿತ್ತು ಎನ್ನುವ ಗಾದೆ ಈ ಕ್ವಾಟರ್ಸ್ ಗೆ ಸೂಕ್ತವಾಗಿದೆ. ಕ್ವಾಟರ್ಸ್ ನಲ್ಲಿ ವಾಸಿಸುವಂತಹ 300 ಕ್ಕೂ ಅಧಿಕ ಪೊಲೀಸ್ ಕುಟುಂಬಗಳು ಇದೀಗ ಬಾಡಿಗೆ ಮನೆಯಲ್ಲಿ ಕಾಲ ಕಳೆಯುವಂತಾಗಿದೆ. ಅದು ಎಲ್ಲಿ ಅಂತೀರಾ ಮುಂದೆ ನೋಡಿ,,
ಹೌದು,,, ಖಾಕಿಪಡೆಯ ಪರಿಸ್ಥಿತಿಯೇ ಹೀಗಾದ್ರೆ ಸಾಮಾನ್ಯ ಜನರ ಪರಿಸ್ಥಿತಿಯೂ ಕೇಳತೀರದ್ದು. ಇತಿಹಾಸ ಸೃಷ್ಟಿಸುವ ನೂರು ವರ್ಷದ ಕ್ವಾಟರ್ಸ್‌ಗಳು ಈಗ ಪಾಳು ಬಿದ್ದು ಕುಡುಕರ ಅಡ್ಡೆಯಾಗಿದೆ. ಈ ಸನ್ನಿವೇಶ ಕಂಡುಬಂದಿದ್ದು ಗದಗ ರಸ್ತೆಯ ನೆಹರು ನಗರದ ಪೊಲೀಸ್ ಕ್ವಾಟರ್ಸ್. ಈಗ ಇಲ್ಲಿ ಯಾರೂ ವಾಸಿಸಲು ಯೋಗ್ಯವಿಲ್ಲದಂತಾಗಿದ್ದು ಜನರು ವಾಸಿಸಬೇಕಾದ ಸ್ಥಳ ಪೋಲಿ ಜನರ ಪಾಲಾಗಿದೆ.
ರೈಲ್ವೆ ಪೊಲೀಸ್ ಕ್ವಾಟರ್ಸ್ ಈಗ ಜಂಗಲ್ ಆಗಿದ್ದು, ಇದರಿಂದಾಗಿ ಸುತ್ತಮುತ್ತಲು ವಾಸಿಸುವವರಿಗೆ ತುಂಬ ತೊಂದರೆಯಾಗಿದೆ. ಪಾಳು ಬಿದ್ದಿರುವ ಕಟ್ಟಡಗಳಲ್ಲಿ ಕಾನೂನ ಬಾಹಿರ ಹಾಗೂ ಅಕ್ರಮ ಚಟುವಟಿಕೆಗಳ ಉಪಟಳಗಳನ್ನು ತಡೆಯಲು ಅತಿ ಶೀಘ್ರದಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ. ಈಗಿರುವ ಕಟ್ಟಡಗಳನ್ನು ಸಂಪೂರ್ಣವಾಗಿ ತಗೆದು ನೂತನವಾಗಿ ರೇಲ್ವೆ ಪೋಲೀಸರಿಗೆ ವಸತಿ ಗೃಹ ಒದಗಿಸಲು ನಿರ್ಧಾರ ಕೈಗೊಳ್ಳುಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಅಧಿಕಾರಿಗಳಿಗೆ ವರದಿ ಸಿದ್ದಪಡಿಸಲು ತಿಳಿಸಿದ್ದಾರೆ.
ಎರಡು ದಿನಗಳ ಹಿಂದೆ ರೇಲ್ವೆ ಪೋಲೀಸ್ ಎಡಿಜಿಪಿ ಭಾಸ್ಕರ್ ರಾವ್, ಎಸ್ಪಿ ಶ್ರೀಗೌರಿ, ಡಿಎಸ್ಪಿ ಪುಷ್ಪಲತಾ ಮತ್ತು ಇನ್ಸ್ಪೆಕ್ಟರ್ ಆಂಜನೇಯ ರೇಲ್ವೆ ಪೋಲೀಸ್ ವಸತಿ ನಿಲಯಕ್ಕೆ ಭೇಟಿ ನೀಡಿ, ರಾಜ್ಯ ಗೃಹ ಇಲಾಖೆಯ ಸೂಚನೆ ಮೇರೆಗೆ, ಈಗಿರುವ ಕಟ್ಟಡಗಳ
ಕುರಿತು ಸರ್ಕಾರ ಸೂಕ್ತವಾದ ಕ್ರಮವನ್ನು ತೆಗೆದುಕೊಂಡು, ಆದಷ್ಟು ಬೇಗ ಸಮಸ್ಯೆ ಬಗೆಹರಿಸಲು ಆಶ್ವಾಸನೆ ನೀಡಿದ್ದಾರೆ. ಎಲ್ಲ ಅಕ್ರಮ ಚಟುವಟಿಕೆಗಳಿಗೆ ಯಾವಾಗ ಕಡಿವಾಣ ಹಾಕುತ್ತಾರೆ ಎಂಬುವುದನ್ನು ಕಾದುನೋಡ ಬೇಕಾಗಿದೆ.
Kshetra Samachara
18/12/2021 05:52 pm