ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ನಮ್ಮೂರಿನ ಸಮಸ್ಯೆಗೆ ಮುಕ್ತಿ ಎಂದು ? ಇದು ಗ್ರಾಮಸ್ಥರ ಪ್ರಶ್ನೆ !

ಹುಬ್ಬಳ್ಳಿ : ಈ ಹಳ್ಳಿಗಳಲ್ಲಿನ ಮೂಲ ಸೌಕರ್ಯಗಳ ಸಮಸ್ಯೆಗೆ ಅದ್ಯಾವಾಗ ಜನಪ್ರತಿನಿಧಿಗಳು ಶಾಶ್ವತ ಪರಿಹಾರ ನೀಡ್ತಾರೊ ಗೊತ್ತಿಲ್ಲ. ಅಲ್ಲಿಯವರೆಗೂ ಹಳ್ಳಿ ಜನರು ನಿತ್ಯ ಸಮಸ್ಯೆಯಲ್ಲೇ ದಿನ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಹೌದು ! ಹಾಳಾದ ರಸ್ತೆ, ತಗ್ಗು ಗುಂಡಿ ತುಂಬಿ ಸಂಚಾರವೇ ದುಸ್ಥರವಾದ ಬದುಕು, ಕೈಗೆ ತಾಗುವಂತೆ ಬೀದಿ ಬದಿ ಜೋತು ಬಿದ್ದ ವಿದ್ಯುತ್ ಸಂಪರ್ಕದ ವಯರ್'ಗಳನ್ನು ನೋಡಿ ಹೆಸ್ಕಾಂ ಇಲಾಖೆಗೆ ಕಳೆದ ನಾಲ್ಕು ತಿಂಗಳುಗಳಿಂದ ಮನವಿ ಮಾಡಿ ಸುಸ್ತಾದ ಗ್ರಾಮಸ್ಥರು ಪಬ್ಲಿಕ್ ನೆಕ್ಸ್ಟ್'ಗೆ ವಿಡಿಯೋ ಕಳುಹಿಸಿ ಸಮಸ್ಯೆ ತಿಳಿಸಿದ್ದಾರೆ.

ಹುಬ್ಬಳ್ಳಿ ತಾಲೂಕಿನ ಹಳ್ಯಾಳ ಗ್ರಾಮದ ಚಂದ್ರಶೇಖರ್ ಎಂಬ ವ್ಯಕ್ತಿ ಹಳ್ಯಾಳದಿಂದ ಅದರಗುಂಚಿಗೆ ಸಂಪರ್ಕ ಕಲ್ಪಿಸುವ ರಸ್ತೆ ಮತ್ತು ಚರಂಡಿ ದುಸ್ಥಿತಿ ಮತ್ತು ಕೈಗೆ ತಾಗುವಂತಿರುವ ವಿದ್ಯುತ್ ವಯರ್ ಹಾಗೂ ರಸ್ತೆ ಬದಿ ವಾಲಿ ಬೀಳುವ ಹಂತದಲ್ಲಿರುವ ವಿದ್ಯುತ್ ಕಂಬಗಳ ಪೋಟೋ ಕಳುಹಿಸಿ ವ್ಯವಸ್ಥೆ ಸುಧಾರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ವೀಕ್ಷಕರ ವರದಿ

Edited By : Nagesh Gaonkar
Kshetra Samachara

Kshetra Samachara

08/12/2021 03:59 pm

Cinque Terre

73.4 K

Cinque Terre

1

ಸಂಬಂಧಿತ ಸುದ್ದಿ