ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಪಶು ಆಸ್ಪತ್ರೆ ಕಟ್ಟಡದ ಕಟ್ಟಿಗೆಗಳು, ಹಾಳಾಗುವ ಮೊದಲೇ ಆಗಲಿ ಹರಾಜು

ಕುಂದಗೋಳ : ಪಟ್ಟಣದ ಹಳೇ ಪಶು ಆಸ್ಪತ್ರೆ ಕಟ್ಟಡ ನೆಲಸಮಗೊಳಿಸುವಾಗ ಕಟ್ಟಡದಲ್ಲಿ ಇದ್ದ ಹಳೆಯ ಕಟ್ಟಿಗೆಗಳ ಹರಾಜು ಪ್ರಕ್ರಿಯೆಗೆ ಪುನಃ ಹೊಸ ಪಶು ಆಸ್ಪತ್ರೆ ತಯಾರಾದ್ರೂ ಕಾಲ ಕೂಡಿ ಬಂದಿಲ್ಲಾ ನೋಡಿ. ಈ ಕಾರಣ ಕಟ್ಟಿಗೆಗಳು ಇಟ್ಟಲ್ಲೇ ಕೊಳೆತು ಹಾಳಾಗುವ ಸ್ಥಿತಿ ಎದುರಾಗಿದೆ.

ಕುಂದಗೋಳ ಪಟ್ಟಣಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಅನುದಾನದಲ್ಲಿ 98 ಲಕ್ಷ ವೆಚ್ಚದಲ್ಲಿ ನೂತನ ಪಶು ಆಸ್ಪತ್ರೆ ಮಂಜೂರಾದ ಹಿನ್ನೆಲೆಯಲ್ಲಿ ಹಳೇ ಪಶು ಆಸ್ಪತ್ರೆ ಕಟ್ಟಡ ನೆಲಸಮ ಮಾಡಿ ಹೊಸ ಪಶು ಆಸ್ಪತ್ರೆ ನಿರ್ಮಾವಾಗಿದ್ದರೂ, ಹಳೇ ಕಟ್ಟಡದ ಕಟ್ಟಿಗೆಗಳು ಹರಾಜು ಕಾಣದೆ ಪಶು ಆಸ್ಪತ್ರೆ ಆವರಣದಲ್ಲಿ ಈ ತರಹ ಇಟ್ಟಲ್ಲೇ ಹಾಳುಗುತ್ತಿದ್ದು, ಕೆಲ ಹಂಚುಗಳು ಒಡೆದರೇ ಕಟ್ಟಿಗೆಗಳು ರಕ್ಷಣೆ ಇಲ್ಲದೆ ಮಳೆಗೆ ಸಿಲುಕಿ ಕೊಳೆಯುತ್ತಿವೆ.

ಈ ಹಳೇ ಕಟ್ಟಡದ ಕಟ್ಟಿಗೆಗಳ ಹರಾಜಿಗೆ ಸಂಬಂಧಪಟ್ಟಂತೆ ಕಳೆದ ಆಗಸ್ಟ್ 21 ರಂದು ಹರಾಜು ಕರೆದರೂ ಜನ ಕಟ್ಟಿಗೆಗಳ ಮೌಲ್ಯ ಹೆಚ್ಚಾದ ಹಿನ್ನೆಲೆಯಲ್ಲಿ ಭಾಗವಹಿಸಿಲ್ಲಾ. ಮತ್ತೋಮ್ಮೆ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಬಂದು ಕಟ್ಟಿಗೆಗಳ ಮೌಲ್ಯ ನಿಗದಿ ಪಡಿಸಿದ ಮೇಲೆ ಹರಾಜು ಪ್ರಕ್ರಿಯೆ ನಡೆಯಬೇಕಿದೆ.

ಆದರೆ ಆ ಅವಧಿಗೂ ಮೊದಲೇ ಪಶು ಆಸ್ಪತ್ರೆ ಆವರಣದಲ್ಲಿ ಸಂರಕ್ಷಣೆ ಇಲ್ಲದೆ ಬಿದ್ದಿರುವ ಕಟ್ಟಿಗೆಗಳು ಮಳೆ ಹಾಗೂ ಹುಳು ಹಿಡಿದು ಹಾಳಾಗುವವೋ ಗೊತ್ತಿಲ್ಲಾ, ಈ ಬಗ್ಗೆ ಆದಷ್ಟೂ ಶೀಘ್ರ ಜಿಲ್ಲಾ ಉಪ ಅರಣ್ಯಾಧಿಕಾರಿಗಳು ಪಶು ಆಸ್ಪತ್ರೆ ಕಟ್ಟಿಗೆಗಳಿಗೆ ಮೌಲ್ಯ ನಿಗದಿ ಮಾಡಿ ಹರಾಜು ಮಾಡಲಿ ಎನ್ನುವುದೇ ಜನರ ಒತ್ತಾಯ.

Edited By : Manjunath H D
Kshetra Samachara

Kshetra Samachara

30/11/2021 03:21 pm

Cinque Terre

20.67 K

Cinque Terre

0

ಸಂಬಂಧಿತ ಸುದ್ದಿ