ಕುಂದಗೋಳ : ಕುಂದಗೋಳ ತಾಲೂಕಿನ ರೈತರೇ, ನಾಗರಿಕರೇ ನೀವೂ ನಿಮ್ಮ ಹೊಲ ಮನೆ ನಿಮ್ಮ ಆಸ್ತಿಗೆ ಸಂಬಂಧಪಟ್ಟಂತೆ ಭೂ ಮಾಪನಾ ಇಲಾಖೆಗೆ ಲೇವಣಿ, ತತ್ಕಾಲ್ ಪೋಡಿ, ಇ ಸ್ವತ್ತು, ಹದ್ದು ಬಸ್ತ್ ಪ್ರಕರಣಕ್ಕೆ ಅರ್ಜಿ ಸಲ್ಲಿಸಿದ್ದೀರಾ ? ಹಾಗಿದ್ರೇ ನಿಮ್ಮ ಕೆಲಸಾ ಆಗೋದು ದೂರದ ಮಾತು ಬಿಡಿ.
ನಿಮ್ಮ ಕೆಲಸ ಆಗಬೇಕಾದ್ರೇ ಈ ಲೈಸೆನ್ಸ್ ಸರ್ವೇದಾರರು ಕರ್ತವ್ಯ ಮಾಡ್ಬೇಕು, ಆದ್ರೇ ಅವ್ರು ನ.8 ರಿಂದ ತಮ್ಮ ವಿವಿಧ ಬೇಡಿಕೆ ಈಡೇರಿಸುವವರೆಗೂ ಕರ್ತವ್ಯ ಮಾಡುವುದಿಲ್ಲ ಎಂದು ಭೂಮಾಪನ ನಿರ್ದೇಶಕರಿಗೆ ಪತ್ರ ಬರೆದು ಕಚೇರಿ ಬಿಟ್ಟು ಹೊರ ನಡೆದಿದ್ದಾರೆ. ಈ ಪರಿಣಾಮ ಕುಂದಗೋಳ ಭೂ ಮಾಪನ ಇಲಾಖೆಯಲ್ಲಿ ಬರೋಬ್ಬರಿ ಒಂದು ಸಾವಿರಕ್ಕಿಂತ ಅಧಿಕ ಅರ್ಜಿಗಳು ಇತ್ಯರ್ಥ ಕಾಣದೆ ಹಾಗೇ ಉಳಿದಿದ್ದು ಲೈಸೆನ್ಸ್ ಸರ್ವೇದಾರರ ಕುರ್ಚಿ ಖಾಲಿ ಆಗಿ ನಿತ್ಯ ರೈತರು ಕಚೇರಿಗೆ ಚಪ್ಪಲಿ ಸವೆಸುವಂತೆ ಮಾಡಿವೆ.
ಇಡೀ ರಾಜ್ಯಾದ್ಯಂತ ಲೈಸನ್ಸ್ ಸರ್ವೇದಾರರು 2400 ಜನ ಕರ್ತವ್ಯದಿಂದ ಹೊರಗುಳಿದರೇ, ಕುಂದಗೋಳ ತಹಶೀಲ್ದಾರ ಕಚೇರಿಯಲ್ಲಿ 8 ಜನ ಕರ್ತವ್ಯ ದೂರ ಸರಿದಿದ್ದಾರೆ.
ಕಳೆದ ಹತ್ತು ಹದಿನೈದು ವರ್ಷಗಳಿಂದ ಇಲಾಖೆ ಲೈಸೆನ್ಸ್ ಸರ್ವೇದಾರರಿಗೆ ಒಂದು ಪ್ರಕರಣದ ಇತ್ಯರ್ಥಕ್ಕೆ ಕೊಡುವ ಇಂತಿಷ್ಟು ಹಣ ಪಡೆದು ಕೆಲಸ ಮಾಡುತ್ತಿದ್ದ ಲೈಸನ್ಸ್ ಸರ್ವೇದಾರರು, ತಮಗೆ ನಿರ್ದಿಷ್ಠ ವೇತನ, ಸೇವಾ ಭದ್ರತೆ, ಸೇರಿ ಇತರೆ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕೆಲಸವನ್ನು ಸ್ಥಗಿತಗೊಳಿಸಿದ್ದಾರೆ.
ಈ ಪರಿಣಾಮ ಕುಂದಗೋಳ ತಾಲೂಕಿನ 57 ಹಳ್ಳಿಗರ ಲೇವಣಿ, ತತ್ಕಾಲ್ ಪೋಡಿ, ಇ ಸ್ವತ್ತು, ಹದ್ದು ಬಸ್ತ್ ಪ್ರಕರಣ ಬಾಕಿ ಉಳಿದಿದ್ದು, ರೈತರು ಆಸ್ತಿ ಹಂಚಿಕೆ ಖಾತಾ ಬದಲಾವಣೆ ವಿಳಂಬದ ಜೊತೆ ಬ್ಯಾಂಕ್, ಸಹಕಾರಿ ಸಂಘ, ಇತರೆ ಸಾಲಕ್ಕೂ ಸಮಸ್ಯೆ ಉಂಟಾಗಿದೆ. ಈ ಭೂ ಮಾಪನಾ ಇಲಾಖೆ ಅಧಿಕಾರಿಗಳು, ಸರ್ಕಾರ ಸ್ಪಷ್ಟ ನಿರ್ಧಾರ ಹೊರಡಿಸಬೇಕಿದೆ.
ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್ ಕುಂದಗೋಳ
Kshetra Samachara
10/11/2021 04:23 pm