ಕುಂದಗೋಳ : ನಿತ್ಯ ಬೆಳಗಾದ್ರೇ ಅನ್ನದಾತನನ್ನು ನೆನೆಯದ ನಮ್ಮ ಬದುಕು ಅಪೂರ್ಣ. ಅಂತಹ ಅನ್ನದಾತನ ಹೊಲದ ದಾರಿಗೆ ಹಿಡಿ ಮಣ್ಣಿಲ್ಲಾ, ಡಾಂಬರ್ ಇಲ್ಲಾ, ನಿತ್ಯ ಕಲ್ಲು ಮುಳ್ಳು ತುಂಬಿದ ರಸ್ತೆ ಸಂಚಾರಕ್ಕೆ ಕುಂದಗೋಳ ತಾಲೂಕಿನ ರೈತರು ಬೇಸತ್ತಿದ್ದಾರೆ.
ಇತ್ತ ನೂಲ್ವಿ ಮಾರ್ಗವಾಗಿ ಕಡಪಟ್ಟಿ ಸೇರುವ ಅತ್ತ ಕುಂದಗೋಳ ಮಾರ್ಗವಾಗಿ ಹುಬ್ಬಳ್ಳಿ ಸೇರುವ ಒಳ ರಸ್ತೆ ಪರಿಸ್ಥಿತಿ ಇದು, ಕಳೆದ ಹತ್ತು ವರ್ಷಗಳ ಹಿಂದೆ ಡಾಂಬರ್ ಕಂಡ ರಸ್ತೆ ಇಂದು ಕಲ್ಲು ಮುಳ್ಳುಗಳ ರಾಶಿ ತುಂಬಿಕೊಂಡು ರೈತಾಪಿ ಜನ ಜಾನುವಾರು ಸೇರಿದಂತೆ ಟ್ರ್ಯಾಕ್ಟರ್ ಸಂಚಾರಕ್ಕೆ ಅಡ್ಡಿಯಾಗಿದ್ರೂ ಯಾವ ಅಧಿಕಾರಿ ಜನಪ್ರತಿನಿಧಿಗಳು ತಿರುಗಿ ನೋಡಿಲ್ಲಾ.
ಇನ್ನೂ ಈ ರಸ್ತೆಗೆ ಬ್ರಿಡ್ಜ್ ಹೊಂದಿಕೊಂಡಿರುವ ರೈಲ್ವೆ ಬ್ರಿಡ್ಜ್ ಕೆಳಗೆ ಮಳೆಗಾಲದಲ್ಲಿ ಸಂಗ್ರಹವಾದ ನೀರು ಇಂದಿಗೂ ಖಾಲಿಯಾಗದೇ ಬ್ರಿಡ್ಜ್ ರಸ್ತೆ ವಿಷ ಜಂತುಗಳ ವಾಸಸ್ಥಳವಾಗಿದ್ರೇ, ರಸ್ತೆಯುದ್ದಕ್ಕೂ ಮುಳ್ಳು ಕಂಟಿ ಬೆಳೆದ ಪರಿಣಾಮ ರಸ್ತೆ ಸಂಚಾರ ದುಸ್ತರವಾಗಿದೆ.
ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಿಸಿ ಅನ್ನದಾತ ಸಂಚರಿಸುವ ರಸ್ತೆಗೆ ಹಿಡಿ ಮಣ್ಣನ್ನು ಹಾಕಿ ನಿಮ್ಮ ಕರ್ತವ್ಯ ನಿಭಾಯಿಸಿ.
Kshetra Samachara
10/11/2021 01:54 pm