ಲಕ್ಷ್ಮೇಶ್ವರ: ಸುವರ್ಣ ಗ್ರಾಮ ಯೋಜನೆ ಹಾಗೂ ಸಂಸದರ ಆದರ್ಶ ಗ್ರಾಮ ಯೋಜನೆ ಇವೆಲ್ಲವೂ ದೊರೆತರೂ ಯಳವತ್ತಿ ಗ್ರಾಮದಲ್ಲಿ ರಸ್ತೆ ಅವ್ಯವಸ್ಥೆಯ ಬವಣೆ ತಪ್ಪಿಲ್ಲ.
ಹೌದು. ಸಣ್ಣ ಪ್ರಮಾಣದ ಮಳೆಯಾದರೂ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಹೊಳೆಯಂತೆ ಆಗುತ್ತವೆ. ಇದರಿಂದಾಗಿ ಸವಾರರು, ಚಾಲಕರು, ಪಾದಚಾರಿಗಳು ಪರದಾಡುವಂತಾಗಿದೆ. ನಿತ್ಯವೂ ಈ ರಸ್ತೆಯಲ್ಲಿ ಟಿಪ್ಪರ್ ಲಾರಿ ಬೃಹತ್ ವಾಹನಗಳು ಸಿಕ್ಕಿಹಾಕಿಕೊಂಡು ಮೂರು ನಾಲ್ಕು ದಿನಗಳ ಕಾಲ ರಸ್ತೆ ಸಂಚಾರಕ್ಕೆ ತೊಂದರೆಯಾಗುತ್ತದೆ. ಯಳವತ್ತಿಯಿಂದ ಚಿಂಚಲಿ ಹಾಗೂ ಮುಳಗುಂದಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ ಇದಾಗಿದೆ.
Kshetra Samachara
12/10/2021 10:40 pm