ಧಾರವಾಡ: ಎಲ್ಲಿ ನೋಡಿದ್ರೂ ಈಗ ರಸ್ತೆದ್ದ ದೊಡ್ಡ ಸಮಸ್ಯೆ ನೋಡ್ರಿ. ಊರ ಹೊರಗಿನ ರಸ್ತೆ ಅಷ್ಟ ಹದಗೆಟ್ಟಿಲ್ರಿ. ಸಿಟಿ ಒಳಗಿನ ರಸ್ತೆನೂ ತುಕ್ಕ ಹಿಡದಂಗ ಆಗ್ಯಾವ. ಈ ರಸ್ತೆ ನೋಡಿದ್ರ ತೆಗ್ಗಿನ್ಯಾಗ ರಸ್ತೆ ಐತ್ಯೋ ರಸ್ತೆದಾಗ ತೆಗ್ಗ ಐತ್ಯೋ ಅನ್ನುವಂಗ ಆಗೇತಿ.
ಹಾ.. ಇದು ನಮ್ಮ ಧಾರವಾಡದಾಗಿನ ರಸ್ತೆ. ಬಸ್ ನಿಲ್ದಾಣದಿಂದ ಕಮಲಾಪುರಕ್ಕ ಸಂಪರ್ಕ ಕಲ್ಪಿಸೋ ರಸ್ತೆ. ಸಿಟಿ ಒಳಗಿನ ರಸ್ತೆನ ಈ ಪರಿ ಇರಬೇಕಾದ್ರ ಇನ್ನ ಊರ ಹೊರಗಿನ ರಸ್ತೆ ಹೆಂಗ ಇರಬೇಕು ಅನ್ನೋದನ್ನ ನೀವ್ ವಿಚಾರ ಮಾಡ್ರಿ.
ಇಲ್ಲೆ ಈ ನಮನಿ ತೆಗ್ಗ ಬಿದ್ದಾವ. ಇವಕ್ಕ ಒಂದ ಬುಟ್ಟಿ ಮಣ್ಣ ಹಾಕಿಸೋವಷ್ಟೂ ಸಮಯ ನಮ್ಮ ಅಧಿಕಾರಿಗಳಿಗೆ ಇಲ್ಲದಂಗ ಆಗೇತಿ. ಪಾಲಿಕೆಯೊಳಗ ಸದಸ್ಯರೇ ಇಲ್ಲ ಅನ್ನೋ ಮಾತು ಇಷ್ಟ ದಿನಾ ಕೇಳಿ ಬರತಿದ್ವು. ಈಗ ಸದಸ್ಯರೂ ಬಂದಾರ ಈಗರ ಇಂತಾ ತೆಗ್ಗು, ಗುಂಡಿ ಮುಚ್ಚಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕಾಗೇತಿ ನೋಡ್ರಿ.
Kshetra Samachara
06/10/2021 01:46 pm