ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಯಾವಾಗ ಬರುತ್ತೇ ಬಸ್? ನಿತ್ಯವೂ ವಿದ್ಯಾರ್ಥಿಗಳ ಸರ್ಕಸ್.!

ಕಲಘಟಗಿ: ಮಹಾಮಾರಿ ಕೊರೊನಾ ವೈರನ್‌ನಿಂದಾಗಿ ಬಾಗಿಲು ಮುಚ್ಚಿದ್ದ ಶಾಲಾ ಕಾಲೇಜು ಪುನಃ ಆರಂಭವಾಗಿವೆ. ಆದರೆ ಕಲಘಟಗಿ ತಾಲೂಕಿನ ಕೆಲ ಹಳ್ಳಿ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಬಸ್ ಸೌಲಭ್ಯ ಇಲ್ಲದ ಕಾರಣ ಬೆಳಿಗ್ಗೆ ಶಾಲೆ ತಲುಪುವುದು ಮತ್ತು ಸಂಜೆ ಮನೆ ವಾಪಸ್‌ ಆಗುವುದು ಎರಡೂ ದುಸ್ತರವಾಗಿದೆ.

ಕಲಘಟಗಿ ತಾಲೂಕಿನ ಸಾತುಸೈದ್, ಜಂಜನಬೈಲ್ ಸೇರಿದಂತೆ ಇತರೆ ಹಳ್ಳಿ ವಿದ್ಯಾರ್ಥಿಗಳ ಜೊತೆ ಪ್ರಯಾಣಿಕರಿಗೂ ಸಾರಿಗೆ ಸಮಸ್ಯೆ ಉಂಟಾಗಿದೆ. ನಿತ್ಯವೂ ಬಸ್ ಯಾವಾಗ ಬರುತ್ತೆ ಎಂದು ವಿದ್ಯಾರ್ಥಿಗಳು ಸಾರಿಗೆ ನಿರ್ವಾಹಕರನ್ನು ಕೇಳಿದರೂ ಸರಿಯಾದ ಉತ್ತರ ಸಿಗುತ್ತಿಲ್ಲ. ಗಂಟೆ, ಎರಡು ಗಂಟೆ ವಿಧಿ ಇಲ್ಲದೆ ಕಾಯ್ದು ಯಾವಾಗ ಬಸ್ ಬರುತ್ತೋ ಅವಾಗ ಮನೆ ಸೇರಬೇಕಾಗಿದೆ.

ಇನ್ನೂ ಕೆಲ ಹಳ್ಳಿ ರಸ್ತೆಗಳು ಮಳೆಯಿಂದಾಗಿ ಹಾಳಾದ ಪರಿಣಾಮ ಬಸ್ ಸೇವೆ ಸ್ಥಗಿತವಾಗಿ ಸಾರಿಗೆ ಪಾಸ್ ಇದ್ದರೂ ವಿದ್ಯಾರ್ಥಿಗಳು ಖಾಸಗಿ ವಾಹನ ಸವಾರಿ ಮಾಡುತ್ತಿದ್ದಾರೆ.

ಈ ಬಗ್ಗೆ ಸಂಬಂಧಪಟ್ಟ ಸಾರಿಗೆ ಅಧಿಕಾರಿಗಳು ಹಾಗೂ ಮಾನ್ಯ ಶಾಸಕ ಸಿ.ಎಂ.ನಿಂಬಣ್ಣನವರ ಗಮನಿಸಿ ವಿದ್ಯಾರ್ಥಿಗಳ ಸಾರಿಗೆ ಸಮಸ್ಯೆಗೆ ಮುಕ್ತಿ ನೀಡಿ ಎಂಬುದು ಪಬ್ಲಿಕ್ ನೆಕ್ಸ್ಟ್ ಕಳಕಳಿ.

Edited By : Manjunath H D
Kshetra Samachara

Kshetra Samachara

13/09/2021 01:39 pm

Cinque Terre

38.26 K

Cinque Terre

1

ಸಂಬಂಧಿತ ಸುದ್ದಿ