ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಇಲ್ಲಿನ ಕೊಳಚೆಗೆ ಕಾರಣ ಯಾರು..?

ನವಲಗುಂದ : ಪಟ್ಟಣದ ಪೂಜಾರ ಗಲ್ಲಿಯ ನಾಶಿಪುಡಿ ಓಣಿಯಲ್ಲಿ ಕಂಡು ಬಂದ ದೃಶ್ಯಗಳಿವು, ರಸ್ತೆ ಪಕ್ಕದಲ್ಲಿ ರಾಶಿ ಕಸ, ಅದರಲ್ಲಿ ಹಾಯಾಗಿ ಮಲಗಿದ ಹಂದಿಗಳು ಇವನ್ನೆಲ್ಲಾ ನೋಡ್ತಿದ್ರೆ ಸ್ವಚ್ಛತೆ ಯಾವ ಮಟ್ಟಕ್ಕಿದೆ ಎಂಬುದು ಅರ್ಥವಾಗುತ್ತೆ.

ಇನ್ನು ಈ ದೃಶ್ಯಗಳನ್ನು ನೋಡಿ ಅಯ್ಯೋ ಏನ್ರಿ ಪುರಸಭೆ ಸಿಬ್ಬಂದಿಗಳು ಈ ಸ್ಥಳವನ್ನು ಸ್ವಚ್ಛಗೊಳಿಸೋದೇ ಇಲ್ವೇನ್ರಿ ಅನ್ಬೇಡಿ, ಅವರ ಕರ್ತವ್ಯವನ್ನು ಅವರು ಅಚ್ಚುಕಟ್ಟಾಗಿಯೇ ನಿರ್ವಹಿಸುತ್ತಿದ್ದಾರಂತೆ ಆದರೂ ಇಲ್ಲಿ ಇಷ್ಟರ ಮಟ್ಟಿಗೆ ಕೊಳಚೆ ತಾಂಡವ ಆಡುತ್ತಿದೆ ಅಂದ್ರೆ ಇದಕ್ಕೆ ಕಾರಣ ಸಾರ್ವಜನಿಕರೆ ಅಂತಾರೆ ನಿಂಗನಗೌಡ್ರು...

ಪುರಸಭೆ ಸಿಬ್ಬಂದಿಗಳು ಪ್ರತಿ ದಿನ ಸ್ವಚ್ಛಗೊಳಿಸಿದರು ಇಲ್ಲಿ ಇಷ್ಟೊಂದು ಅಸ್ವಚ್ಛತೆ ತಾಂಡವ ಆಡುತ್ತಿದೆ. ಇದರಿಂದ ಇಲ್ಲಿನ ಸ್ಥಳೀಯರಿಗೆ ಸಾಂಕ್ರಮಿಕ ರೋಗದ ಕಾಟ ಇದೆ. ಈ ಬಗ್ಗೆ ಪುರಸಭೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡು ಇಲ್ಲಿ ಕಸ ಎಸೆಯುವ ಸಾರ್ವಜನಿಕರಿಗೆ ದಂಡ ಅಥವಾ ಬೇರೆಯಾವುದಾದರೂ ಕ್ರಮ ಜರುಗಿಸುವಲ್ಲಿ ಮುಂದಾದರೆ ಇಲ್ಲಿನ ಕೊಳಚೆಗೆ ಬ್ರೇಕ್ ಬಿಳ್ಳಬಹುದಾಗಿದೆ. ಇನ್ನು ಸ್ಥಳೀಯರು ಸಹ ತಮ್ಮ ಅರೋಗ್ಯದ ಹಿತದೃಷ್ಟಿಯಿಂದಾದರೂ ಇಲ್ಲಿ ಕಸ ಚಲ್ಲದೆ ಸ್ವಚ್ಛತೆ ಕಾಪಾಡಬೇಕಿದೆ.

Edited By : Nagesh Gaonkar
Kshetra Samachara

Kshetra Samachara

29/07/2021 10:37 pm

Cinque Terre

21.41 K

Cinque Terre

0

ಸಂಬಂಧಿತ ಸುದ್ದಿ