ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಫೆ.20 ರಂದು ಗೋಕುಲ ಗ್ರಾಮದಲ್ಲಿ ನಗರ ತಹಶೀಲ್ದಾರ ಗ್ರಾಮ ವಾಸ್ಥವ್ಯ

ಹುಬ್ಬಳ್ಳಿ: ಸರಕಾರದ ನಿರ್ದೇಶನದನ್ವಯ ಫೆ.20 ರಂದು 3ನೇ ಶನಿವಾರ ಹುಬ್ಬಳ್ಳಿ ನಗರ ತಹಶೀಲ್ದಾರರ ಕಚೇರಿ ವತಿಯಿಂದ ಬೆಳಿಗ್ಗೆ 11-00 ಗಂಟೆಗೆ ಗೋಕುಲ ಗ್ರಾಮದ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಗ್ರಾಮ ವಾಸ್ಥವ್ಯ ಹಮ್ಮಿಕೊಳ್ಳಲಾಗಿದೆ. ಗ್ರಾಮಸ್ಥರು ಕಂದಾಯ ಇಲಾಖೆಗೆ ಸಂಬಂಧ ಪಟ್ಟ ಕುಂದುಕೊರತೆಗಳು, ಪಹಣಿಯಲ್ಲಿನ ಎಲ್ಲ ಲೋಪ ದೋಷ, ಪೋತಿ ಖಾತೆ, ಅನಧೀಕೃತ ಸಾಗುವಳಿ ಫಾರ್ಮ ನಂ : 57, ಮನೆ ಹಾನಿಯಾದ ಬಗ್ಗೆ ಪರಿಹಾರದ ಕುರಿತು , ಕೆರೆ ಒತ್ತುವರಿ , ಸ್ಮಶಾನದ ಲಭ್ಯತೆ , ಅಂಗವಿಕಲ , ವೃದ್ಧಾಪ್ಯ , ವಿಧವಾ , ಮನಸ್ವಿನಿ , ಮೈತ್ರಿ , ರಾಷ್ಟ್ರೀಯ ಕೌಟುಂಬಿಕ ನೆರವು , ಅಂತ್ಯ ಸಂಸ್ಕಾರ ಹಾಗೂ ವಿವಿದ ಮಾಶಾಸನಗಳ ಮಂಜೂರಾತಿ ಅರ್ಜಿ ಸಲ್ಲಿಸಬಹದು.

ಈಗಾಗಲೇ ಸಲ್ಲಿಸಿರುವ ಅರ್ಜಿಗಳ ಕುರಿತು ಮಾಹಿತಿ ಪಡೆಯಬಹುದು.‌ ಮಾಶಾಸನ ಪಡೆದವರ ಆಧಾರ ಜೋಡಣೆ ಹಾಗೂ ಬ್ಯಾಂಕ ಖಾತೆಗೆ ಜೋಡಣೆಯನ್ನು ಸ್ಥಳದಲ್ಲಿ ಮಾಡಲಾಗುವುದು. ವಿಷೇಶವಾಗಿ ಆರಾಧನಾ ಯೋಜನೆಯಲ್ಲಿ ದೇವಸ್ಥಾನ ಅಭಿವೃದ್ಧಿ ಕುರಿತು ಹಾಗೂ ಇನ್ನಿತರ ಸೌಲಭ್ಯಗಳನ್ನು ಪಡೆಯಲು ಅರ್ಜಿಯನ್ನು ಸ್ವೀಕರಿಸಲಾಗುವುದು ಎಂದು ಗ್ರಾಮ ವಾಸ್ತವ್ಯದ ಅಧ್ಯಕ್ಷತೆ ವಹಿಸುವ ತಹಶೀಲ್ದಾರರ ಶಶಿಧರ ಮಾಡ್ಯಾಳ ಪ್ರಕಟಣೆಯಲ್ಲಿ‌ ತಿಳಿಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

17/02/2021 07:48 pm

Cinque Terre

19.11 K

Cinque Terre

0

ಸಂಬಂಧಿತ ಸುದ್ದಿ