ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ :ಕಾಂಕ್ರೀಟ್ ರಸ್ತೆ ನಿರ್ಮಾಣ ಜನತೆ ಜವಾಬ್ದಾರಿ - ಶಾಸಕಿ ಕುಸುಮಾವತಿ

ಕುಂದಗೋಳ : ಬಿಳೇಬಾಳ ಗ್ರಾಮದ ಜನರ ಬಹುದಿನಗಳ ಬೇಡಿಕೆ ಕಾಂಕ್ರೀಟ್ ರಸ್ತೆ ನಿರ್ಮಾಣದ ಕೆಲಸಕ್ಕೆ ಅನುದಾನ ಬಿಡುಗಡೆಯಾಗಿದ್ದು ಶೀಘ್ರವೇ ಕಾಮಗಾರಿ ನಡೆಯಲಿದೆ ಎಂದು ಶಾಸಕಿ ಕುಸುಮಾವತಿ ಶಿವಳ್ಳಿ ಹೇಳಿದರು.

ಅವರು ತಾಲೂಕಿನ ಬಿಳೇಬಾಳ ಗ್ರಾಮದ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ 22 ಲಕ್ಷ ಮೊತ್ತದ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ ಅವರು ಮಾತನಾಡಿ ಪಂಚಾಯಿತಿ ಸದಸ್ಯರ ನೆರವು ಶಾಸಕರ ಅನುದಾನ ಅಡಿಯಲ್ಲಿ ನಿಮ್ಮೂರಿನ ಕೆಲಸ ಮಾಡಿಸಿಕೊಳ್ಳಿ ಎಂದರು.

ಇದೇ ಸಮಯದಲ್ಲಿ ಬಿಳೇಬಾಳ ಹಾಗೂ ದೇವನೂರು ಗ್ರಾಮಕ್ಕೆ ನೂತನವಾಗಿ ಆಯ್ಕೆಯಾದ ಪಂತಾಯಿತಿ ಸದಸ್ಯರು ಶಾಸಕರನ್ನು ಸನ್ಮಾನಿಸಿ ತಮ್ಮೂರಿಗೆ ಸಾರಿಗೆ ಸೌಲಭ್ಯ ಹೆಚ್ಚಿಸಿ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಬಿಳೇಬಾಳ, ದೇವನೂರು ಗ್ರಾಮದ ಗುರು ಹಿರಿಯರು ಸಾರ್ವಜನಿಕರು ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

16/02/2021 10:07 pm

Cinque Terre

14.2 K

Cinque Terre

0

ಸಂಬಂಧಿತ ಸುದ್ದಿ