ಕುಂದಗೋಳ : ಕೊರೊನಾ ಕರಾಳ ದಿನಗಳಲ್ಲಿ ಅದೆಷ್ಟೋ ಯುವಕರು ತಮ್ಮ ಉದ್ಯೋಗ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿ ಸ್ವಂತ ಉದ್ಯೋಗದ ಕನಸು ಕಂಡಿದ್ದರು.
ಇಂತಹ ಸ್ವಂತ ಉದ್ಯೋಗಗಳಿಗೆ ನೆರವಾಗಲೇಂದೆ ಕುಂದಗೋಳ ಪಟ್ಟಣ ಪಂಚಾಯಿತಿ ತೋಟಗಾರಿಕೆ ಇಲಾಖೆ ಮುಂಭಾಗದಲ್ಲಿ ನಿರ್ಮಿಸಿದ 8 ಸುಸಜ್ಜೀತ ಮಳಿಗೆಗಳನ್ನು ಟೆಂಡರ್ ಕರೆಯದೆ ಸುದೀರ್ಘ ಮೌನ ತಾಳಿತ್ತು.
ಈ ಬಗ್ಗೆ ಪಬ್ಲಿಕ್ ನೆಕ್ಸ್ಟ್ ವರದಿ ಬಿತ್ತರಿಸಿ "ಕದ ಹಾಕಿದ ಮಳಿಗೆ ಟೆಂಡರ್ ಕರೆಯದ ಪಟ್ಟಣ ಪಂಚಾಯಿತಿ" ಎಂಬ ಶೀರ್ಷಿಕೆಯಲ್ಲಿ ವರದಿ ಬಿತ್ತರಿಸಿ ಮಳಿಗೆಗಳ ಟೆಂಡರ್ ವಿಚಾರದಲ್ಲಿ ಅಧಿಕಾರಿಗಳ ಗಮನ ಸೆಳೆದಿತ್ತು.
ಈ ಬಗ್ಗೆ ಕ್ರಮ ಕೈಗೊಂಡ ಜಿಲ್ಲಾಡಳಿತ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಳಿಗೆಗಳನ್ನು ಟೆಂಡರ್ ಕರೆಯಲು ಸೂಚಿಸಿದ್ದು ಶೀಘ್ರದಲ್ಲೇ ಇ-ಟೆಂಡರ್ ಪ್ರಕ್ರಿಯೆ ದಿನಾಂಕ ಮತ್ತು ವಿಳಾಸವನ್ನು ಪಟ್ಟಣ ಪಂಚಾಯಿತಿ ನೀಡಲಿದೆ.
ಒಟ್ಟಾರೆ ಪಬ್ಲಿಕ್ ನೆಕ್ಸ್ಟ್ ವರದಿ ಪ್ರಕಟಗೊಂಡ ಬಳಿಕ ಪಟ್ಟಣ ಪಂಚಾಯಿತಿ ಮಳಿಗೆ ಕದ ತೆರೆಯುವ ಸೌಭಾಗ್ಯ ಒದಗಿ ಬಂದಿದ್ದು ಸ್ವಂತ ಉದ್ಯೋಗದ ಕನಸು ಕಂಡವರಿಗೆ ಸ್ಥಳಾವಕಾಶ ಸಿಕ್ಕಂತಾಗಿದೆ.
ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್ : ಶ್ರೀಧರ ಪೂಜಾರ
Kshetra Samachara
12/02/2021 03:36 pm