ಹುಬ್ಬಳ್ಳಿ: ವಾಣಿಜ್ಯ ನಗರಿಯಲ್ಲಿನ ಜನತೆ ಒಂದಲ್ಲಾ ಒಂದು ಮೂಲಭೂತ ಸೌಕರ್ಯಗಳಿಂದ ಬಳಲುತ್ತಿದ್ದಾರೆ. ಇಂತಹ ಮತ್ತೊಂದು ಸಮಸ್ಯೆ ಉದ್ಭವವಾಗಿದ್ದು, ಅಲ್ಲಿನ ಅಧಿಕಾರಿಗಳಿಗೆ ಸಮಸ್ಯೆ ಬಗ್ಗೆ ಹೇಳಿಕೊಂಡರು ಸಹ ಯಾವುದೇ ಪ್ರಯೋಜನ ವಾಗಿಲ್ಲ ಎಂದು ಪಾಲಿಕೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ..
ಹೌದು, ಹೀಗೆ ಕುಟುಂಬಸ್ಥರೆಲ್ಲರು, ಮೂಗು ಮುಚ್ಚಿಕೊಂಡು, ಅಧಿಕಾರಿಗಳಿಗೆ ಬೈಯುತ್ತಿರುವ ದೃಶ್ಯಗಳು ಕಂಡು ಬಂದಿದ್ದು, ನಗರದ ವಾರ್ಡ್ ನಂಬರ್ 67 ಕೆ.ಕೆ. ನಗರ ಮೂರನೆಯ ಕ್ರಾಸ್‌ನಲ್ಲಿರುವ ಎಮ್ ಡಿ ಕಾಲೋನಿಯಲ್ಲಿ. ಕಳೆದ ಒಂದು ತಿಂಗಳಿನಿಂದ ಚರಂಡಿ ತುಂಬಿ ಮನೆಯಲ್ಲಿ ನೀರು ನುಗ್ಗಿದ ಪರಿಣಾಮ. ಕುಟುಂಬಸ್ಥರು ಚರಂಡಿಯ ವಾಸನೆ ತಾಳಲಾರದೆ ಗೋಳಾಡುತ್ತಿದ್ದಾರೆ. ಇನ್ನು ಚರಂಡಿ ಅವ್ಯವಸ್ಥೆ ಬಗ್ಗೆ ಪಾಲಿಕೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಇನ್ನು ಪಾಲಿಕೆ ಅಧಿಕಾರಿಗಳ ಸಿಬ್ಬಂದಿ ಕಳುಹಿಸಿ ಅರ್ಧಂಬರ್ದ ಕಾಮಗಾರಿ ಮಾಡಿ ಹಾಗೇ ಬಿಟ್ಟಿದ್ದಾರೆ. ಇದರಿಂದಾಗಿ ನಿವಾಸಿಗಳು ಪರದಾಡುವ ಪ್ರಸಂಗ ಬಂದೊದಗಿದ್ದು ವಾಸನೆ ತಾಳಲಾರದೆ ಪಾಲಿಕೆ ವಿರುದ್ಧ ಗರಂ ಆಗಿದ್ದಾರೆ...
ಇನ್ನು ಚರಂಡಿ ತುಂಬಿ ಮನೆಯಲ್ಲೆ ನೀರು ನುಗ್ಗಿದ ಪರಿಣಾಮ, ಅಡುಗೆ ಮಾಡಿ ಊಟ ಮಾಡಲು ಸಹ ತೊಂದರೆಯಾಗುತ್ತಿದೆ. ರಸ್ತೆಯಲ್ಲಿನ ಚರಂಡಿ ಒಡೆದ ಪರಿಣಾಮ, ಓಣಿಯಲ್ಲಿ ಗಬ್ಬು ವಾಸನೆ ಜೊತೆಗೆ ಅರ್ಧಂಬರ್ಧ ಕಾಮಗಾರಿ ಮಾಡಿ ಬಿಟ್ಟಿದ್ದರಿಂದ ಮಕ್ಕಳು ಅದರಲ್ಲಿ ಬಿದ್ದರೆ ಹೇಗೆ ಎಂಬ ನಿವಾಸಿಗಳಲ್ಲಿ ಆತಂಕ ಮೂಡಿದೆ. ಇನ್ನೂ ಮೊದಲೆ ಕೊರೊನಾ ಅಂತಹ ಮಾರಕ ರೋಗಗಳ ಬಗ್ಗೆ ಜಾಗೃತಿ ಮೂಡಿಸುವ ಪಾಲಿಕೆ ಅಧಿಕಾರಿಗಳು, ಇಲ್ಲಿನ ಸಮಸ್ಯೆಗಳ ಬಗ್ಗೆ ಗೊತ್ತಿದ್ದರೂ ಸಹ ಯಾವುದೇ ಕ್ರಮ ಕೈಗೊಳ್ಳದೇ ಬೇಜವಾಬ್ದಾರಿತನ ತೋರಿಸುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿದೆ. ಕೂಡಲೆ ಸಮಸ್ಯೆ ಬಗೆಹರಿಸಬೇಕು ಇಲ್ಲವಾದರೆ ಸ್ಥಳೀಯರೆಲ್ಲರೂ ಕೂಡಿ ಪಾಲಿಕೆಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ಜೊತೆಗೆ ಮನವಿ ಮಾಡಿದ್ದಾರೆ.
ಒಟ್ಟಿನಲ್ಲಿ ದಿನವಿಡೀ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುವ ಪಾಲಿಕೆ ಅಧಿಕಾರಿಗಳು ಇತ್ತ ಗಮನಹರಿಸಿ ಚರಂಡಿ ಸಮಸ್ಯೆಗೆ ಇತ್ಯರ್ಥ ಹಾಡಬೇಕಾಗಿದೆ...!
Kshetra Samachara
05/02/2021 01:33 pm