ನವಲಗುಂದ : ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸಿಲಿಂಡರ್ ದರ ಏರಿಕೆಯಿಂದಾಗಿ ಬಡವರ ಬದುಕು ದುಸ್ತರವಾಗಿದೆ ಈ ಕೂಡಲೇ ಇವುಗಳ ಬೆಲೆ ಇಳಿಕೆ ಮಾಡಬೇಕು ಎಂದು ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ವತಿಯಿಂದ ಸೋಮವಾರ ನವಲಗುಂದ ತಹಸೀಲ್ದಾರ್ ಮೂಲಕ ಮನವಿ ಪತ್ರ ನೀಡಲಾಯಿತು.
ಇನ್ನು ಡಾ ಬಿ.ಆರ್ ಅಂಬೇಡ್ಕರ್ ದಲಿತ ಸಂಘರ್ಷ ಸಮಿತಿ ಸಂಘಟಣೆಯು ಸಹ ಈ ಪ್ರತಿಭಟನೆಗೆ ಸಾಥ್ ನೀಡಿದ್ದು, ಈ ವೇಳೆ ತಾಲೂಕ ಅಧ್ಯಕ್ಷ ಪ್ರಶಾಂತ ಈರೆಶನವರ, ಶಿವು ಬೆಳಹಾರ, ಸತೀಶ ಗರಗದಮಠ, ಮಾಂತೇಶ್ ಹಿರೇಮಠ್, ಶಿವಪ್ಪ ಗುಡಿಸಾಗರ, ಪ್ರವೀಣ ಹೂಗಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Kshetra Samachara
01/02/2021 01:49 pm