ನವಲಗುಂದ : ಚರಂಡಿ ಸ್ವಚ್ಛತೆ ನಂತರ ಕೊಳಚೆಯನ್ನು ಅಲ್ಲೇ ಚರಂಡಿ ಪಕ್ಕದಲ್ಲೇ ಒಂದು ದಿನ ಬಿಡ್ತಾರೆ ಕಾರಣ ಅದು ಒಣಗಿದ ನಂತರ ಅದನ್ನ ಅಲ್ಲಿಂದ ತೆರವುಗೊಳಿಸಲಾಗುತ್ತೆ, ಆದ್ರೆ ವಾರ ಗಟ್ಟಲೆ ಅದನ್ನ ಅಲ್ಲೇ ಬಿಟ್ರೆ ಅದರಿಂದ ಸುತ್ತಲಿನ ಸ್ಥಳೀಯರಿಗೆ ಸಾಂಕ್ರಾಮಿಕ ರೋಗದ ಭಯ ಕಾಡದೆ ಇರದು.
ಯಮನೂರಿನಿಂದ ನವಲಗುಂದ ಪಟ್ಟಣದ ಪ್ರವೇಶ ಮಾಡುವ ಸ್ಥಳದಲ್ಲೇ ಈ ರೀತಿ ಅವ್ಯವಸ್ಥೆ ಕಂಡು ಬರೋದು, ಇನ್ನು ಚರಂಡಿ ಸಹ ಬ್ಲಾಕ್ ಆಗಿದೆ. ಸುತ್ತ ಮುತ್ತ ಮನೆಗಳು ಇರೋದ್ರಿಂದ ಈ ಸ್ಥಳವನ್ನು ಶುಚಿಗೊಳಿಸೋದು ಸಂಬಂಧ ಪಟ್ಟ ಅಧಿಕಾರಿಗಳ ಜವಾಬ್ದಾರಿಯಾಗಿದೆ.
Kshetra Samachara
17/01/2021 03:46 pm