ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಜನಾಕ್ರೋಶಕ್ಕೆ ಕಾರಣವಾದ ಕಳಪೆ ಕಾಮಗಾರಿ ರಸ್ತೆ !

ಕುಂದಗೋಳ : ಮತಕ್ಷೇತ್ರದ ಕಟ್ನೂರು ಗ್ರಾಮದಿಂದ ನೂಲ್ವಿ, ಶರೇವಾಡ, ಬುಡರಸಿಂಗಿ, ಮಾರ್ಗವಾಗಿ ನಿತ್ಯ ರೈತಾಪಿ ಜನ ಸಂಚರಿಸುವ 3 ಕಿ.ಮೀ ರಸ್ತೆ ಕಾಮಗಾರಿ ಕಳಪೆಯಾಗಿದ್ದು, ನಿತ್ಯ ವಾಹನದಲ್ಲಿ ಹೊಲದಲ್ಲಿನ ತರಕಾರಿ, ಹಣ್ಣು, ತರುವ ರೈತರು ಹಾಗೂ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಕೈಗಾರಿಕೆಗಳಿಗೆ ಕರ್ತವ್ಯಕ್ಕೆ ತೆರಳುವ ಜನರಿಗೆ ತೊಂದರೆಯಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಕಳೆದ ಹದಿನೈದು ದಿನಗಳ ಹಿಂದೆ ಕಟ್ನೂರು ಗ್ರಾಮದಿಂದ ಇತರ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಡಾಂಬರೀಕರಣ ಮಾಡಲಾಗಿದ್ದರೂ, ಆ ಕಾಮಗಾರಿ ಕಳಪೆ ಆದ ಪರಿಣಾಮ ಮೊನ್ನೆ ಸುರಿದ ಅಕಾಲಿಕ ಮಳೆಗೆ ಡಾಂಬರ್ ಕಿತ್ತೊಗಿದೆ.

ಇನ್ನು ಇದೇ ರಸ್ತೆ ಹೊಂದಿಕೊಂಡಿರುವ ಕರ್ಕಿ ಹಳ್ಳದ ಮೇಲೆ ಹಾಕಿದ್ದ ಡಾಂಬರ್ ಸಹ ಸಂಪೂರ್ಣ ಕಿತ್ತೊಗಿದ್ದು ಸಾರ್ವಜನಿಕ ಸಂಚಾರಕ್ಕೆ ತೊಂದರೆ ಉಂಟಾಗಿದೆ ಎನ್ನುತ್ತಿದ್ದಾರೆ ಸ್ಥಳೀಯರು.

ಬರೋಬ್ಬರಿ 3 ಕಿ.ಮೀ ರಸ್ತೆಯುದ್ದಕ್ಕೂ ಸುರಿದ ಡಾಂಬರು ಈ ರೀತಿ ಕಳಪೆ ಆಗಿರುವ ಕಾರಣ ಸ್ಥಳೀಯರು ಕೋಪಗೊಂಡು ಕಳಪೆ ಕಾಮಗಾರಿಯ ರಸ್ತೆ ವಿಡಿಯೋಗಳನ್ನು ಪಬ್ಲಿಕ್ ನೆಕ್ಸ್ಟ್ ಕಳುಹಿಸಿ ಸಂಬಂಧಪಟ್ಟವರು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

12/01/2021 12:53 pm

Cinque Terre

40.31 K

Cinque Terre

0

ಸಂಬಂಧಿತ ಸುದ್ದಿ