ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಗ್ರಾಮ ಪಂಚಾಯಿತಿಯನ್ನೇ ಮಾರಾಟಕ್ಕೆ ಇಟ್ಟ ಗ್ರಾಮಸ್ಥರು !

ಕುಂದಗೋಳ : ತಾಲೂಕಿನ ಶಿರೂರು ಗ್ರಾಮ ಪಂಚಾಯಿತಿ ವತಿಯಿಂದ ಮಂಜೂರಾದ ನಿವೇಶನಗಳನ್ನು ನಿರ್ಮಾಣ ಮಾಡಿಕೊಂಡ ಕೂಲಿಕಾರರಿಗೆ ನರೇಗಾ ಯೋಜನೆಯಡಿ ಎನ್.ಎಮ್.ಆರ್ ನೀಡಲು ಪಿಡಿಓ ಗಮನ ಹರಿಸದೆ ಸತಾಯಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಪಂಚಾಯತಿಯನ್ನೇ ಮಾರಾಟಕ್ಕಿಟ್ಟ ಘಟನೆ ಶಿರೂರು ಗ್ರಾಮದಲ್ಲಿ ನಡೆದಿದೆ.

ಕುಂದಗೋಳ ತಾಲೂಕಿನ ಶಿರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನರೇಗಾ ಕಾಮಗಾರಿ ಸೇರಿದಂತೆ ನಿವೇಶನಗಳನ್ನು ನಿರ್ಮಾಣ ಮಾಡಿಕೊಂಡ ಫಲಾನುಭವಿಗಳಿಗೆ ಪಿಡಿಓ ಎನ್.ಎಮ್.ಆರ್ ನೀಡದೆ ದಿನ ಕಳೆಯುತ್ತಿದ್ದಾರೆ ಎಂದು ಆರೋಪಿಸಿರುವ ಗ್ರಾಮಸ್ಥರು ಪಂಚಾಯಿತಿಗೆ ಬೀಗ ಜಡಿದು ಪ್ರತಿಭಟನೆ ನಡೆಸುತ್ತಿದ್ದು ಸ್ಥಳಕ್ಕೆ ತಾಲೂಕು ಪಂಚಾಯಿತಿ ಅಧಿಕಾರಿಗಳು ಬರುವಂತೆ ಪಟ್ಟು ಹಿಡಿದಿದ್ದಾರೆ.

ಇಂದು ಬೆಳಿಗ್ಗೆ ಪಂಚಾಯಿತಿ ಕಟ್ಟಡಕ್ಕೆ ಸಮಸ್ಯೆ ಹೊತ್ತು ಆಗಮಿಸಿದ ಸಾರ್ವಜನಿಕರು ಪಂಚಾಯಿತಿ ಒಳಗಿನ ಕಂಪ್ಯೂಟರ್, ಪ್ರೀಂಟರ್, ಚೇರ್ ಹೊರಗಿಟ್ಟು ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ, ಪಂಚಾಯಿತಿ ಗೋಡೆ ಮೇಲೆ ಪಂಚಾಯಿತಿ ಮಾರಾಟಕ್ಕಿದೆ ಎಂದು ಬರೆದು ಪ್ರತಿಭಟನೆ ನಡೆಸುತ್ತಿದ್ದಾರೆ.

ಈ ಕುರಿತು ಸ್ವತಃ ಶಿರೂರು ಗ್ರಾಮಸ್ಥರೇ ಪಬ್ಲಿಕ್ ನೆಕ್ಸ್ಟ್ ಗೆ ವಿಡಿಯೋ ಕಳುಹಿಸಿ ನಮ್ಮ ಸಮಸ್ಯೆಗೆ ಸ್ಪಂದನೆ ಸಿಗೋ ವರೆಗೂ ನಾವು ಪಂಚಾಯಿತಿ ಬಿಟ್ಟು ಕದಲುವುದಿಲ್ಲ ಎನ್ನುತ್ತಿದ್ದಾರೆ.

Edited By :
Kshetra Samachara

Kshetra Samachara

11/01/2021 01:44 pm

Cinque Terre

40.38 K

Cinque Terre

0

ಸಂಬಂಧಿತ ಸುದ್ದಿ