ಹುಬ್ಬಳ್ಳಿ: ಅವಳಿ ನಗರದ ಜನರು ಸ್ಥಳೀಯ ರಾಜಕಾರಣಿಗಳನ್ನು ಹಾಡಿ ಹೊಗಳದ ದಿನವಿಲ್ಲ. ಮನೆಯಿಂದ ಹೊರ ಬಿದ್ದರೆ ಸಾಕು ರಸ್ತೆ, ಸೇತುವೆ, ಟ್ರಾಫಿಕ್ ಸಮಸ್ಯೆಗಳು ಬಿಟ್ಟು ಬಿಡದೇ ಕಾಡುತ್ತವೆ.
ವಿವಿಧ ಸ್ಥಳಗಳ ಪರಿಸ್ಥಿತಿ, ಜನರ ಯಾತನೆ ಗೊತ್ತಿದ್ದರೂ ನಾಯಕರು ಮಾತ್ರ ಚುನಾವಣೆ, ಬೆಂಗಳೂರ ಲೈಫ್‌ನಲ್ಲಿ ಫುಲ್ ಬ್ಯುಸಿಯಾಗಿದ್ದಾರೆ.
ಅದರಲ್ಲೂ ಕಳೆದ ನಾಲ್ಕು ತಿಂಗಳಿಂದ ದಾಜಿಬಾನ್ ಪೇಟೆಯಲ್ಲಿರುವ ರಾಜಕಾಲುವೆ ಸೇತುವೆ ದುರಸ್ತಿ ಕಾಮಗಾರಿ ನಡೆದಿದೆ. ಆದರೆ ಕಾಂಕ್ರೀಟ್ ಹಾಕಿದ ಜಾಗಕ್ಕೆ ನೀರು ನುಗ್ಗಿ ಸಿಮೆಂಟ್ ಕೊಚ್ಚಿ ಹೋಗುತ್ತಿದೆ.
ಹೀಗೆ ಮಾಡಿದರೆ ಸೇತುವೆ ಕೆಲವೇ ದಿನಗಳಲ್ಲಿ ಮತ್ತೇ ಕುಸಿದು ಬೀಳುತ್ತದೆ ಎನ್ನುವುದು ಸ್ಥಳೀಯರ ಆರೋಪವಾಗಿದೆ.
Kshetra Samachara
30/12/2020 06:00 pm