ಹುಬ್ಬಳ್ಳಿ: ಹೀಗೆ ಒಂದು ರಸ್ತೆಯಿಂದ ಇನ್ನೊಂದು ರಸ್ತೆಗೆ ದಾಟುವುದಕ್ಕೆ ಹರಸಾಹ ಪಡುತ್ತಿರುವ ಜನ, ಇಲ್ಲಿನ ನಿವಾಸಿಗಳು ಗುಂಪು ಸೇರಿಕೊಂಡು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ದೃಶ್ಯ ಕಂಡು ಬಂದಿದ್ದು,
ನಗರದ ಸೆಟ್ಲಿಮೆಂಟನ ಗಂಗಾಧರ ನಗರದ 6 ನೇ ಕ್ರಾಸ್ ಬಳಿ, ನಿವಾಸಿಗಳ ಗೋಳ. ಚರಂಡಿ ನೀರು ಹೋಗಲು ಇದ್ದ ಬ್ರಿಜ್ ಕಸದಿಂದ ತುಂಬಿ, ಚರಂಡಿ ನೀರು ಮನೆಯಲ್ಲಿ ನುಗ್ಗುತ್ತಿತ್ತು.
ಮನೆಯಲ್ಲಿಯೂ ಮೂಗು ಮುಚ್ಚಿಕೊಂಡು ಇರುವಂತಹ ಪರಿಸ್ಥಿತಿ ಎದುರಾಗಿತ್ತು, ಆದ ಕಾರಣ ಪಾಲಿಕೆ ಅಧಿಕಾರಿಗಳಿಗೆ ತಿಳಿಸಿದ ಕೂಡಲೆ.
ನಮ್ಮ ಅಧಿಕಾರಿಗಳು ಕಸ ತೆಗೆಯುವುದನ್ನು ಬಿಟ್ಟ ಇದ್ದ ಒಂದು ಬ್ರಿಜ್ ನ್ನು ಜೆಸಿಬಿ ಯಿಂದ ತೆಗೆದು ಹಾಕಿ ಇಲ್ಲಿನ ನಿವಾಸಿಗಳಿಗೆ ಅತಂತ್ರ ಮಾಡಿದ್ದಾರೆ.
ಸುಮಾರು ಒಂದು ವರ್ಷದಿಂದ ಈ ಬ್ರಿಜ್ ನ್ನು ತೆಗೆದರು ಇಲ್ಲಿಯ ವರೆಗೂ ಯಾರು ಬಂದು ನೋಡಿಲ್ಲ. ಮತ್ತು ಎಷ್ಟೋ ಬಾರಿ ಇಲ್ಲಿನ ಸಮಸ್ಯೆ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದರೆ ಕ್ಯಾರೆ ಎನ್ನುತ್ತಿಲ್ಲ.
ಕೇವಲ ಕಂಪ್ಲೇಟ್ ಮಾತ್ರ ತೆಗೆದುಕೊಳ್ಳುತ್ತಾರೆ. ಕೆಲಸ ಆಗುತ್ತಿಲ್ಲವೆಂದು ಇಲ್ಲಿನ ಜನರು ತಮ್ಮ ಗೋಳನ್ನು ತೋಡಿಕೊಂಡಿದ್ದಾರೆ.
ಒಟ್ಟಿನಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಎಡವಟ್ಟಿನಿಂದ ಆದ ಈ ಕಾರ್ಯಕ್ಕೆ, ಅಲ್ಲಿನ ಜನರು ದಿನಂಪ್ರತಿ ಮೂಗು
ಮುಚ್ಚಿಕೊಂಡು ಕೈಯಲ್ಲಿ ಜೀವ ಹಿಡಿದುಕೊಂಡು ಓಡಾಡುತ್ತಿದ್ದಾರೆ. ಆದಷ್ಟು ಬೇಗ ಸಂಬಂಧಿಸಿದ ಅಧಿಕಾರಿಗಳು ಇಲ್ಲಿನ ನಿವಾಸಿಗಳ ಸಂಕಷ್ಟಕ್ಕೆ ಸ್ಪಂದಿಸಬೇಕಾಗಿದೆ..!
Kshetra Samachara
29/12/2020 11:16 am