ಧಾರವಾಡ: ಜಯತೀರ್ಥರ ವೃಂದಾವನ ಆನೆಗುಂದಿಯಲ್ಲಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಇದನ್ನು ಯಾರೂ ನಂಬಬಾರದು ಈ ರೀತಿ ಸುಳ್ಳು ಸುದ್ದಿ ಹಬ್ಬಿಸುತ್ತಿರುವ ಕಿಡಿಗೇಡಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಹುಬ್ಬಳ್ಳಿ, ಧಾರವಾಡ ಬ್ರಾಹ್ಮಣ ಸಮುದಾಯ ಹಾಗೂ ಜಯತೀರ್ಥರ ಭಕ್ತವೃಂದದವರು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಜಯತೀರ್ಥರ ಮೂಲ ವೃಂದಾವನ ಮಳಖೇಡದಲ್ಲೇ ಇದೆ. ಸಾಮಾಜಿಕ ಜಾಲತಾಣದ ಮೂಲಕ ಈ ವೃಂದಾವನ ಆನೆಗುಂದಿಯಲ್ಲಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದ್ದು, ಇದನ್ನು ಯಾರೂ ನಂಬಬಾರದು. ಮಳಖೇಡವೇ ಜಯತೀರ್ಥರ ಮೂಲ ವೃಂದಾವನವಾಗಿದೆ. ಯಾರೂ ಸುಳ್ಳು ಸುದ್ದಿಗೆ ಕಿವಿಗೊಡಬಾರದು ಎಂದು ಬ್ರಾಹ್ಮಣ ಸಮುದಾಯದವರು ಸಂದೇಶ ರವಾನಿಸಿದರು.
Kshetra Samachara
06/07/2022 03:24 pm