ನವಲಗುಂದ : ನವಲಗುಂದ ಪಟ್ಟಣದ ವಾರ್ಡ್ ನಂಬರ್ 2ರ ರಾಮಲಿಂಗ ಓಣಿಯಲ್ಲಿನ ರಾಮಲಿಂಗೇಶ್ವರ ಕಾಮಣ್ಣ ಪ್ರತಿಷ್ಠಾಪನೆ ನಿಮಿತ್ತ ವಾರ್ಡ್ ಸದಸ್ಯರಾದ ಜೀವನ ಪವಾರ್ ಅವರ ನೇತೃತ್ವದಲ್ಲಿ ರಸ್ತೆ, ಚರಂಡಿ ಸೇರಿದಂತೆ ಸಂಪೂರ್ಣ ಸ್ವಚ್ಛಗೊಳಿಸಲಾಯಿತು.
ಹೌದು ರಾಮಲಿಂಗ ಕಾಮಣ್ಣನ ದರ್ಶನಕ್ಕೆ ರಾಜ್ಯ ಹೊರ ರಾಜ್ಯಗಳಿಂದ ಭಕ್ತರು ಸಾಗರೋಪಾದಿಯಲ್ಲಿ ಬರುತ್ತಾರೆ. ಈ ವೇಳೆ ಭಕ್ತರಿಗೆ ಯಾವುದೇ ಸಮಸ್ಯೆ ಆಗದಂತೆ ಮುತುವರ್ಜಿ ವಹಿಸಿ, ನವಲಗುಂದ ಪುರಸಭೆಯ ಮುಖ್ಯಾಧಿಕಾರಿ ವೀರಪ್ಪ ಹಸಬಿ, ಅಧ್ಯಕ್ಷರಾದ ಮಂಜುನಾಥ ಜಾಧವ ಹಾಗೂ ವಾರ್ಡ್ ಸದಸ್ಯರಾದ ಜೀವನ ಪವಾರ ಸೇರಿದಂತೆ ಪುರಸಭೆಯ ಸರ್ವ ಸದಸ್ಯರು ಮತ್ತು ಸಿಬ್ಬಂದಿಗಳಿಂದ ದೇವಸ್ಥಾನದ ಸುತ್ತಲಿನ ಪ್ರದೇಶದ ಸಂಪೂರ್ಣ ಸ್ವಚ್ಛತೆ ಹಾಗೂ ಶೌಚಾಲಯ, ಬೀದಿ ದೀಪ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಮೂಲ ಸೌಕರ್ಯಗಳ ವ್ಯವಸ್ಥೆ ಮಾಡಲಾಗುತ್ತಿದೆ.
Kshetra Samachara
14/03/2022 05:53 pm